ಯುಗ ಯುಗಾದಿ
ಕವನ
ಯುಗ ಯುಗಾದಿ ಯುಗ ಯುಗಗಳಿಂದ ಸಾಗಿ ಬರುತ್ತಿದೆ
ಹೊಸತನವ ಹೊತ್ತು ಹೊಸ ಬಾಳಿಗೆ ಬೆಳಕಾಗಿ ನಿಂತು
ಹೊಸವರ್ಷ ಹೊಸಹರ್ಷ ತುಂಬಿ ಕುಣಿದು ಕುಪ್ಪಳಿಸಿ ಬರುತ್ತಿದೆ
ಹೊಂಗನಸ್ಸಿನ ಆಶಾ ಕಿರಣ ತುಂಬಿ ಎಲ್ಲರ ಹೃದಯ ಅರಳಿಸಲು.
ಯುಗ ಯುಗಾದಿ ಯುಗ ಯುಗಗಳಿಂದ ಸಾಗಿ ಬರುತ್ತಿದೆ
ಬೇವು ಬೆಲ್ಲ ಬಾಳಿನ ಸಿಹಿ-ಕಹಿಗಳ ಸಮನ್ವಯ ಸಾರುತ್ತಾ
ವಸಂತ ಋತುವಿನ ಆಗಮನ ಮಾಮರ ಚಿಗುರು ಚಿಗುರುತ್ತಿದೆ
ಎಲ್ಲಾ ಮನುಜರ ಬಾಳಿನ ಹೊಸ ದಿಕ್ಕು ಸೂಚಿಯಾಗಿ .
ಯುಗ ಯುಗಾದಿ ಯುಗ ಯುಗಗಳಿಂದ ಸಾಗಿ ಬರುತ್ತಿದೆ
ಚಂದಮಾಮನ ನೋಡುವ ಭಾಗ್ಯದಿಂದಲೇ ನವವರ್ಷ ಹರ್ಷ ತುಂಬಿ
ಹಿರಿಯರ ಕಿರಿಯರ ಪರಸ್ಪರ ಶುಭ ಕೋರುತ್ತಾ ನಗೆ ತುಂಬಿ
ಹಿಗ್ಗದಿರು ಕುಗ್ಗದಿರು ನೀ ಮನುಜನೆ ಎಂದೆಂದು ಸಹಬಾಳ್ವೆಯಿಂದ.
ಹೆಚ್.ವಿರುಪಾಕ್ಷಪ್ಪ.ತಾವರಗೊಂದಿ.