ಯುದ್ಧ ಮುಗಿಯಲೇ ಇಲ್ಲ

ಯುದ್ಧ ಮುಗಿಯಲೇ ಇಲ್ಲ

ಕವನ

 

ಬುದ್ಧ ಕಣ್ಮುಚ್ಚಿ ಕುಳಿತಿದ್ದ
ಯುದ್ಧ ಮುಗಿಯಲೇ ಇಲ್ಲ
ಕಾಲ್ಗಳು ಕೈಗಳು ಬೆರಳ್ಗಳು
ಕಣ್ಗಳು ನಿರ್ಭಂದಕೊಳಗಾಗಿ
ಮನಸ್ಸು ಓಡುತ್ತಲೆ ಇತ್ತು

ರಷ್ಯಾ ಜರ್ಮನ ಜಪಾನ್ಗಳು
ಉಕ್ರೆನ್ ಭಾರತ ಪಾಕಿಸ್ತಾನ್ಗಳು 
ಎಡಬಿಡದೆ ಎಲ್ಲಕಡೆ ಸಂಚರಿಸಿದ
ಆದರೂ ಯುದ್ಧ ಮುಗಿಯಲೇ ಇಲ್ಲ

ಬುದ್ಧ ನೆಲದ ನಾಡಿನಲಿ ಸಂಚರಿಸಿದ
ಧರ್ಮಯುದ್ಧಗಳ ಕಂಡ
ಮನುಕುಲ ಮನಕಲಕುವದ ಕಂಡ
ಯುದ್ಧ ಮುಗಿಯಲೇ ಇಲ್ಲ

ಹೊರ ಯುದ್ಧ ಒಳ ಯುದ್ಧ
ಮತ್ತೆ ಮತ್ತೆ ಯುದ್ಧ
ಮನಃದುದ್ದ ಕಿಡಿ ಬೆಂಕಿಗೆ ಗಾಳಿ ತಾಕಿ
ಬೂದಿಯಾಗುವದ ಕಂಡ
ಯುದ್ಧ ಮುಗಿಯಲೇ ಇಲ್ಲ

ಅಮಯಾಕರ ರಕುತ ಮರಗುವುದು
ಬೂದಿಯಾರದೋ ವೇದನೆ ಯಾರದೋ
ಮನರಂಜನೆ ಯಾರಿಗೋ
ಓ ಬುದ್ಧ ನಿನ್ನ ನೆಳಲ ತಾಕಲೇ ಇಲ್ಲ ನೆಲಕೆ
ಯುದ್ಧ ಮುಗಿಯಲೇ ಇಲ್ಲ

ಚಿತ್ರ್