ಯುವ ಜನರೆ ಎದ್ದೇಳಿ
ಕವನ
ಏಳಿ ಯುವ ಜನರೆ ಎದ್ದೇಳಿ
ರಾಷ್ಟ್ರೀಯ ಯುವ ದಿನ
ಮತ್ತೆ ಬಂದಿದೆ ಎದ್ದೇಳಿ
ಜಾತಿ ಧರ್ಮಗಳ ಮೀರಿ
ಬೆಳೆಯುತ್ತ...
ರಾಷ್ಟ್ರ ಕಟ್ಟೋಣ ಎದ್ದೇಳಿ|೧|
ಒಂದೊಂದು ಎದೆಯಲ್ಲು
ನೂರಾನೆ ಶಕ್ತಿ ಇದೆ
ಅರಿತು ಮುಂದಡಿಯಿಡಲು
ಎದ್ದೇಳಿ
ಬಾಹ್ಯ ಕರಗಳಲಿ ಕರಗಿ
ಹೋಗುವ ಮುನ್ನ
ಭವ್ಯ ಭಾರತಕಾಗಿ ಎದ್ದೇಳಿ|೨|
ಎದೆಗಿಳಿಸಿ ಶಿಕ್ಷಣವ
ಅಕ್ಷರದ ಜೊತೆಯಲ್ಲಿ
ಪ್ರಜ್ಞಾವಂತರಾಗಲು
ಎದ್ದೇಳಿ
ಉದ್ಯೋಗವೆಂದೆನಿಸಿ
ಧನ ಕನಕಗಳ ಅಡಿ ಬಿದ್ದು
ಜಜ್ಜಿ ಹೋಗುವ ಮುನ್ನ ಎದ್ದೇಳಿ|೩|
ದ್ವೇಷ ರೋಷಗಳ
ಪ್ರೀತಿ ಸ್ನೇಹಗಳಾಗಿ
ಬಾಂಧವ್ಯ ಕಟ್ಟೋಣ
ಎದ್ದೇಳಿ
ದುಷ್ಟ ಶಕ್ತಿಗಳ
ಮುಕ್ತಿ ತೋರಿಸಲು
ಶಕ್ತಿಗೂಡೋಣ
ಎದ್ದೇಳಿ |೪|
ಏಳಿ ಯುವ ಜನರೆ ಏಳಿ
ವಿವೇಕ ಜಯಂತಿಗೆ ಮತ್ತೆ
ಅರ್ಥ ಕಟ್ಟೋಣ
ಎದ್ದೇಳಿ
ಮುದುಡಿ ಹೋಗುವ ಕನಸ
ಮತ್ತೆ ಎತ್ತರಿಸೋಣ
ಸದೃಢ ಭಾರತಕಾಗಿ
ಎದ್ದೇಳಿ|೫|
-ಜನಾರ್ದನ ದುರ್ಗ, ಪುತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್