"ಯು ವಿ ಸಿ ಇ" ಮೆಗಾ ರೀಯೂನಿಯನ್
ಆತ್ಮೀಯ ಸಂಪದಿಗರೇ,
ಈ ಮೊದಲು ತಿಳಿಸಿದಂತೆ "ಯು.ವಿ.ಸಿ.ಇ(ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ)" ಕಾಲೇಜಿನ ಹಳೇ ವಿದ್ಯಾರ್ಥಿಗಳ ಪುರ್ನಮಿಲನ "2011"ರ ಜನೆವರಿ 2ರಂದು ಜರುಗಲಿದೆ. ಇದಕ್ಕಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವವರ ನೋಂದಾವಣೆ ಇದೇ 23ರಿಂದ ಅಂದರೆ ಬರುವ ಸೋಮವಾರದಿಂದ ಪ್ರಾರಂಭವಾಗಲಿದೆ. ಹಾಗೆಯೇ ಈ ಕಾರ್ಯಕ್ರಮಕ್ಕೆ ಯಾವುದೇ ರೀತಿಯಲ್ಲಿ ಸಹಾಯ ಮಾಡಲು ಬಯಸುವವರು "ಯು.ವಿ.ಸಿ.ಇ" ಕಾಲೇಜಿಗೆ ಇದೇ ಶನಿವಾರ ಮಧ್ಯಾಹ್ನ 3 ಘಂಟೆಗೆ ಬಂದು ಕಾರ್ಯಕ್ರಮದಲ್ಲಿ ಈಗಾಗಲೇ ತೊಡಗಿಸಿಕೊಂಡವರೊಂದಿಗೆ ಚರ್ಚಿಸಬಹುದು. ಈ ಕಾರ್ಯಕ್ರಮಕ್ಕೆ ಸ್ವಯಂಸೇವಕರಾಗಲು(volunteers) ಬಯಸುವವರು ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ ಈ ಕೆಳಗಿನವರನ್ನು ಸಂರ್ಪಕಿಸಬಹುದು.
ವಿಶ್ವನಾಥ್.ಡಿ.ಎ- 8105837663
ಶಿವರಾಜ್ - 9844996063
ಸತೀಶ್ ಎ ಜಿ -9740111552
ಮೆಗಾ ರೀಯೂನಿಯನ್ ಬಗ್ಗೆ ಯಾವುದೇ ಮಾಹಿತಿಗಾಗಿ ಕೂಡ ಈ ಮೇಲಿನವರನ್ನು ಸಂರ್ಪಕಿಸಬಹುದು.
P.S: ಇದನ್ನು ಓದುತ್ತಿರುವವರು ಈ ಕಾಲೇಜಿಗೆ ಸೇರಿಲ್ಲದಿದ್ದರೂ ತಮಗೆ ಗೊತ್ತಿರುವ ಈ ಕಾಲೇಜಿನ ಹಳೆಯ ಮತ್ತು ಪ್ರಸ್ತುತ ವಿದ್ಯಾರ್ಥಿಗಳು/ಅಧ್ಯಾಪಕರಿಗೆ ದಯವಿಟ್ಟು ತಿಳಿಸಿ.
ನಿಮ್ಮ ಸಂಪದಿಗ,
ವಿಶ್ವನಾಥ್