ಯೂರೋಚಾಂಪಿಯನ್‌ , ಸ್ಪೇನ್ ನಲ್ಲಿ ಒಬ್ಬ ಫುಟ್ಬಾಲ್ ಅಭಿಮಾನಿ, ಸಾವನ್ನಪ್ಪಿರುವುದು ದುರದೃಷ್ಟಕರ !

ಯೂರೋಚಾಂಪಿಯನ್‌ , ಸ್ಪೇನ್ ನಲ್ಲಿ ಒಬ್ಬ ಫುಟ್ಬಾಲ್ ಅಭಿಮಾನಿ, ಸಾವನ್ನಪ್ಪಿರುವುದು ದುರದೃಷ್ಟಕರ !

ಬರಹ

ಸ್ಪೇನ್ ತಂಡ ಯುರೋಪಿಯನ್ ಚಾಂಪಿಯನ್‌ಷಿಪ್ ಗೆಲುವಿನ ನಂತರ ಮಧ್ಯರಾತ್ರಿಯವರೆಗೆ ನಡೆದ ಸಂಭ್ರಮಾಚರಣೆಯಲ್ಲಿ 40 ವರ್ಷವಯಸ್ಸಿನ ಒಬ್ಬ ಅಭಿಮಾನಿ ಮ್ಯಾಡ್ರಿಡ್ ನಲ್ಲಿ ಸಾವನ್ನಪ್ಪಿರುವುದು ವರದಿಯಾಗಿದೆ. ಸ್ಪೇನ್ ರಾಜಧಾನಿಯಲ್ಲಿ ಮೃತ ಅಭಿಮಾನಿ ಸ್ಪೇನ್ ತಂಡದ ಸೂಚಕವಾದ ಕೆಂಪು ಬಣ್ಣದ ಜಾಕೆಟ್ ಧರಿಸಿದ್ದು, ಕೆಳಗೆ ಬಿದ್ದಿರುವುದರಿಂದ ತಲೆಗೆ ಗಾಯಗಳಾಗಿರುವುದು ಕಂಡುಬಂದಿವೆ.

ಸುಮಾರು 44 ವರ್ಷಗಳ ನಂತರ ಸ್ಪೇನ್ ತಂಡಕ್ಕೆ ಪ್ರಮುಖ ಟ್ರೂಫಿ ಒಲಿದಿದ್ದು, 1964 ರಲ್ಲಿ ಸ್ಪೇನ್‌ನಲ್ಲಿ ನಡೆದ ಯುರೋಛಾಂಪಿಯನ್‌ಷಿಪ್‌ನಲ್ಲಿ ರಷ್ಯಾ ವಿರುದ್ದ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿತ್ತು. ಫುಟ್ಬಾಲ್ ನಂತಹ ಸಂಭ್ರಮದ, ರೋಚಕದ ಆಟ ಮತ್ತೊಂದಿಲ್ಲ. ಫುಟ್ಬಾಲ್ ಆಟದಲ್ಲಿ ನಡೆಯುವ ಬಿರುಸಿನ ಮಾತುಕತೆ, ಹೊಡೆದಾಟ, ಗಾಯ, ಏಳುವ ಬೀಳುವ ಸಂಗತಿಗಳು, ಸಾಮಾನ್ಯ. ಇಂಗ್ಲೆಂಡ್ ನಲ್ಲಿ ಫುಟ್ಬಾಲ್ ವೀಕ್ಷಿಸುತ್ತಿದ್ದ ರಸಿಕರ ಅಬ್ಬರ ಹಾಗೂ ಸಾವುನೋವಿನ ಸಂಗತಿ ಸರ್ವವಿದಿತವಾಗಿದೆ. ಮ್ಯಾಂಚೆಸ್ಟರ್ ಯುನೈಟೆಡ್ ಪಂದ್ಯದ ನಂತರ ಇಂತಹ ಘಟನೆಗಳು ಆಗಲೇ ಬೇಕಂತೆ. ಅಲ್ಲಿಯೇ ಅಡ್ಡಾಡುವ ಫುಟ್ಬಾಲ್ ಪುಂಡ ಪೋಕರಿಗಳ ನಡವಳಿಕೆ ಅತಿ ಭಯಂಕರ. ಕ್ರಿಕೆಟ್ ನಲ್ಲಿ ಈ ತರಹದ ಪ್ರಸಂಗಗಳು ತೀರಕಡಿಮೆ. ಒಟ್ಟಿನಲ್ಲಿ ೯೦ ನಿಮಿಷದಲ್ಲಿ ನಡೆಯುವ ಕಾಲ್ಚೆಂಡಿನಾಟವನ್ನು ಹೋಲುವ ಪಂದ್ಯವನ್ನು ಹೆಸರಿಸಲು ಸಾಧ್ಯವಿಲ್ಲ.

(ಮೂಲ - ವೆಬ್‌ದುನಿಯಾ