ಯೋಗರಾಜ ಭಟ್ಟರ ಹೊಸ ಪರಮಾತ್ಮ

ಯೋಗರಾಜ ಭಟ್ಟರ ಹೊಸ ಪರಮಾತ್ಮ

 ಯೋಗರಾಜ ಭಟ್ಟರ ಹೊಸ ಪರಮಾತ್ಮ


 



ಪರಮ ಆತ್ಮ ವಿಶ್ಲೇಶಿಸುತ್ತಾ ತನ್ನ ಖುಷಿಯೋ ಶಾಂತಿಯೋ ಅನ್ವೇಷಣೆಯನ್ನು ಕ್ಲಾಸಿನಲ್ಲಿ ಡುಮ್ಕಿ ಹೊಡೆದೋ, ಹೊಡೆದಾಟದಲ್ಲೋ ಸಿಗದೆ ಹಿಮಾಲಯದಲ್ಲೂ ಅರಸಿ ಕಾಣದೇ ನೇಪಾಲದಲ್ಲೂ ಅರಸಿ ಸಿಗದೇ, ಅವನಿಗೆ ಒಪ್ಪೂ ಹಾಕದ ಗಂಡು ಹುಡುಗಿಯಲ್ಲಿ ಕಂಡು ಅವಳ ಪ್ರೇಮದಲ್ಲಿ, ಸಂಗದಲ್ಲಿ ತನ್ನ ಸುಖವನ್ನರಸುತ್ತಾನೆ ಪಾಪ ಪರಮಾತ್ಮ.


.ತಾನು ಪ್ರೀತಿಸುವವಳೇ ತನಗೆ ಒಲಿವಳು ಅವಳ ಒಲವು ಪಡೆಯುವುದೇ ತನ್ನ ಪರಮ ಧೇಯ ಎನ್ನುವ ನಾಯಕ ಇಲ್ಲದ ಪಡಿಪಾಟಲು ಪಡುವುದೇ ಕಥೆಯ ಅಂತರಂಗ. ಸ್ಥಿತಪ್ರಜ್ಞ ನಾಯಕ ಎಲ್ಲಾ ಕಾಲದಲ್ಲಿಯೂ ತನ್ನವಳ ಗುಂಗಿನಲ್ಲೇ ವ್ಯವಹರಿಸುತ್ತಿದ್ದಾನೆ. ಅತ್ಯಂತ ಆತಂಕಕಾರೀ ಸನ್ನಿವೇಶದಲ್ಲೂ ( ತುಂಬು ನದೀ ನೀರಿನಲ್ಲಿ ಒಂದು ಹರಿಗೋಲಿನಲ್ಲಿ ನಾಯಕ ನಾಯಕಿ ಇಬ್ಬರೇ ದಿಕ್ಕು ದೆಸೆಯಿಲ್ಲದೇ ರಾತ್ರಿ ಇಡೀ ಇರುವ ಸಂದರ್ಭ ಬಂದಾಗ , ಹರಿಗೋಲು ನಡೆಸುವ ಹುಟ್ಟು ಇಲ್ಲದೇ ನಾಯಕ ಕೈಯಲ್ಲಿರುವ ಪೀಪಿಯಿಂದಲೇ ಹುಟ್ಟು ಹಾಕುತ್ತಿರುವಾಗ) ನಾಯಕಿ ಹುಟ್ಟೆಲ್ಲಿ ಎಂದು ಕೇಳುವಾಗ ನಾಯಕ ಕೆ ಸಿ ಜನರಲ್ ಹಾಸ್ಫಿಟಲ್ ನಲ್ಲಿ ಎನ್ನುತ್ತಾನೆ , ಆಗ ನಾಯಕಿ ಅದಲ್ಲ ಅಯ್ಯೋ ಹುಟ್ಟು ಎಂದು ಸೀರಿಯಸ್ ಆಗಿ ಅರಚುವಾಗಲೂ ನಾಯಕ ಮುಗುಮ್ ಆಗಿ ಸಾವಿನ ವಿಷಯ ಹೇಳಿದೆನಾ ನಾನು ಅನ್ನುತ್ತಾನೆ. ಬೇಸರ ಅಸಹಾಯಕತೆ ಸಿಟ್ಟು ಬಂದಾಗಲೆಲ್ಲಾ ನಾನು ಸಾಯ್ತೇನೆ ಎನ್ನುವ, ಅತ್ಯಂತ ಕ್ಲಿಷ್ಟ ಸಮಯದಲ್ಲೂ ಹಲ್ಲು ಕಿಸಿಯುವ, ತನ್ನ ಸಮಸ್ಯೆಯನ್ನು ತನ್ನ ಹವ್ಯಾಸದಲ್ಲಿ ಪರಿಹಾರ ಕಂಡುಕೊಳ್ಳುವ ನಾಯಕಿಯ ಅಭ್ಯಾಸಗಳನ್ನು, ತನ್ನ ಅಂತರಂಗದ ಗೆಳತಿಯನ್ನು ಅತ್ಯಂತ ಹೆಚ್ಚು ಪ್ರೀತಿಸುವ ನಾಯಕ ಅವಳ ಅಭ್ಯಾಸಗಳನ್ನು ತಾನೇ ಹೊಂದುವಲ್ಲಿ ತಾದಾತ್ಮತೆ ಹೊಂದುತ್ತಾನೆ.



ಭಟ್ಟರ ಈ ದೇವರಲ್ಲಿ ಪುನೀತ್ ರವರ ತಾದಾತ್ಮತೆ ಎದ್ದು ಕಾಣುತ್ತದೆ. ನಿಜ ಭಟ್ಟರೇ ಎಂದಂತೆ ಇಡೀ ಸಿನೇಮಾದಲ್ಲಿ ಪ್ರತಿಯೊಬ್ಬರೂ ತುಂಬಾನೇ ಚೆನ್ನಾಗಿ ಅಭಿನಯಿಸಿದ್ದಾರೆ.ದೀಪಾಳ ಮಂಗಳೂರಿನ ಹುಡುಗಿಯ ಪಾತ್ರ ಸೂಪರ್, ಐಂದ್ರಿತಾ ಚೆಲ್ಲು ಪಾತ್ರದಲ್ಲಿ ನೈಸ್, ಎಲ್ಲಕ್ಕಿಂತ ಚೆನ್ನಾಗಿದ್ದುದು ಪಾತ್ರಗಳ ಜತೆಯ ಉತ್ತಮ ಸಂಭಾಷಣೆ. ಆಡು ಮಾತಿನ ಸೊಗಡು, ಪ್ರತಿ ವಾಕ್ಯದಲ್ಲೂ ಬರೋ ಪಂಚು, ಹಾಸ್ಯವೂ ಭೇಷ್ ಅನ್ನುವಂತಿದೆ.ಒಟ್ಟಾರೆಯಾಗಿ ಇಡೀ ಸಿನೇಮಾ ಮನೆಮಂದಿಯೆಲ್ಲಾ ಕುಳಿತು ನೋಡುವ ಹಾಗಿದೆ.


ಇಬ್ಬರು ಹುಡುಗಿಯರ ನಡುವೆ ಪುನೀತ ಬನ ಬಿಚ್ಚಿ ಎಂದಿನಂತೆ ನಿರಾಯಾಸವಾಗಿ ಅಭಿನಯಿಸಿದ್ದಾರೆ. ಕಥೆಯ ಹಂದರದ ಬಿಗು ಗಟ್ಟಿಯಿದೆ. ಮುಂದೆ ಹೀಗೇ ಆಗುತ್ತೆ ಎಂದು ಊಹಿಸದಂತೆ ಕಥೆಯ ತಿರುವು ಸಾಗಿದೆ. ನವಿರಾದ ಕಚಗುಳಿ ಇಡುವ ಹಾಸ್ಯದಿಂದ ಸಾಗುವ ಕಥೆಯ ಓಘ ಎಲ್ಲಿಯೂ ತನ್ನ ಹೂರಣದಿಂದ ಹೊರ ಬಂದಿಲ್ಲ. ಬದಲು ಪ್ರತಿ ಚೊಕಟ್ಟಿನಿಂದಲೂ ತನ್ನ ತನವನ್ನು ಮಜಬೂತುಗೊಳಿಸುತ್ತಾ ಸಾಗಿದೆ.


ಕೊನೆಯಲ್ಲಿನ ಕರಡಿಯ ಸನ್ನಿವೇಶವಂತೂ ಹೃದಯ ಕಲಕುವಂತಿದೆ. ಅನಂತ್ ಪಾತ್ರ ತಂದೆಯಾಗಿ ಮನೋಜ್ಞವಾಗಿದೆ.ರಂಗಾಯಣ ರಘು ಪಾತ್ರವಂತೂ ಅದ್ಭುತವಾಗಿ ಮೂಡಿ ಬಂದಿದೆ ಅವರ ಪಾತ್ರ ಮೋಡಿ ಮಾಡಿದೆ. ಕಥೆಯ ಪ್ರತಿ ತಿರುವಿನಲ್ಲೂ ಮುಂದೇನು ಎನ್ನುವ ಕುತೂಹಲ ಬರಿಸುತ್ತಾ ನಾಯಕ ನಾಯಕಿಯ ಮಾತಿನಲ್ಲೇ ತಿರುವು ಕೊಡುತ್ತಾ ಹೇಳಿಸುವ ರೀತಿ ಮುದ ನೀಡಿತು. ಹೀಗೆ ಭಟ್ಟರ ಛಾಫು ಪ್ರತಿ ಹಂತದಲ್ಲೂ ಮೆಚ್ಚುಗೆ ಪಡೆಯುತ್ತ ಮುಂದುವರಿಯುತ್ತೆ. ಸುರಮ್ಯ ಹೊರಾಂಗಣ, ಜೋಡಿಗಳ ಕಂಬಳ, ಚಿತ್ರೀಕರಣ ಅದ್ಭುತವಾಗಿದೆ.


ಹಾದುಗಳಂತೂ ಹೊಸ ರೀತಿಯಲ್ಲಿ ಕಚಗುಳಿಯಿಡುತ್ತಿವೆ. ,


ಭಟ್ಟರಿಗೆ ತೆರೆದ ಟೋಪಿಯ ನಮನದೊಂದಿಗೆ


ನೂರರಲ್ಲಿ ತೊಂಭತೊಂಬತ್ತು ಮಾರ್ಕು

Comments