ಯೋಗಿನಿ ಜ್ಞಾನರೂಪಿಣಿ ಮಹಾಗೌರಿ ಮಾತೆ

ಯೋಗಿನಿ ಜ್ಞಾನರೂಪಿಣಿ ಮಹಾಗೌರಿ ಮಾತೆ

ಕವನ

ನಮಸ್ತೇ ಶ್ರೀ ದುರ್ಗೆ ಅಷ್ಟಮಾವತಾರೆ 

ಭಕುತ ಸಂಕುಲವ ರಕ್ಷಿಸುವ ಧೀರೆ|

ಮಹಾಯೋಗಿನಿ ಜ್ಞಾನ ರೂಪಿಣಿ ಮಾತೆ

ಬೇಡಿದ ಇಷ್ಟಾರ್ಥ ನೀಡುವ ದಾತೆ||

 

ಸದಾನಂದ ಆನಂದ ತಾಯ ಸ್ವರೂಪೆ

ವಿಶ್ವವಂದ್ಯೆ ವಿಶ್ವರೂಪೆ ಕರುಣಾರವಿಂದೆ|

ಪಾಪನಾಶಿನಿ ಪರಿಶುದ್ಧವಾಸಿನಿ

ಅಭಯಹಸ್ತದಾಯಿನಿ ವರಪ್ರದಾಯಿನಿ||

 

 ಸರಸ್ವತಿ ಮಹಾಸತಿ ವೀಣಾ ಹಸ್ತೇ

ಮೋಕ್ಷಪ್ರಿಯೆ ವಿದ್ಯಾಧಿಮಾತೇ|

ಶುಭ್ರವಸ್ತ್ರಧಾರಿಣಿ ಸಂಕಲ್ಪಕಾರಿಣಿ

ವೃಷಭವಾಹನೇ ಆಭರಣಧಾರಿಣಿ||

 

ಮಹಾತಪಸ್ವಿನಿ ಪರಮೇಶ ಪ್ರಿಯೆ

ಆದಿಪರಾಶಕ್ತಿ ಮೂಜಗವಂದಿನಿ|

ಪಾಪನಾಶಿನಿ ಇಷ್ಟಾರ್ಥದಾಯಿನಿ

ಕಲ್ಯಾಣಿ  ಕೌಶಿಕೆ ಕದಂಬವಾಸಿನಿ||

 

ಕಾಮಾಕ್ಷಿ ಕಾತ್ಯಾಯಿನಿ ಕಾಲರಾತ್ರಿ  ತಾಯೆ

ಕರವೀರಪುರವಾಸಿನಿ ಕಾಮರೂಪ ಕೃಪಾವತಿ|

ಶುದ್ಧಭಕ್ತಿಗೆ ಒಲಿದು ಬದ್ಧತೆಯಲಿ ಹರಸು

ಶಾಂತಸ್ವರೂಪಿಣಿ ತ್ರಿಶೂಲಧಾರಿಣಿ||

 

ಪೂಜೆ ಉಪವಾಸ ಧೂಪ ದೀಪ ಅರ್ಪಿಸುವೆ

ತೆಂಗಿನಕಾಯಿಯ ವಿಶೇಷ ಸೇವೆ ನಿನಗಂತೆ/

ಶಕ್ತಿ ಪ್ರೀತಿ ಸೌಂದರ್ಯದ ಅಧಿದೇವತೆ

ಪರಶಿವನ  ಪ್ರಿಯಸತಿ ಅಂಬಿಕೆಯು ನೀನಂತೆ//

 

ಭಕ್ತರ ಮನೋಭಿಲಾಷೆಯ ಅರಿತು ಸಲಹು

ಅಂಬಿಕೆ ಲಲಿತಾ ಅನ್ನಪೂರ್ಣೆ ದೇವಿ/

ಕೈಗೊಂಬ ಕಾಯಕದಿ ನಿಷ್ಠೆ ಪ್ರಾಮಾಣಿಕತೆ ಮೆರೆಯಲಿ

ಕೃಪೆದೋರು ಮಹಾಗೌರಿ ತಾಯೆ ಪೊಡಮಡುವೆ//

 

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್