ಯೋಗ- ಸಿರಿಯೋಗ

ಯೋಗ- ಸಿರಿಯೋಗ

ಕವನ

ಯೋಗಾ ಯೋಗ್ಯ ಯೋಗಾ

ಶುಭ ಯೋಗ- ಸಿರಿ ಯೋಗ

ಪುಣ್ಯ ಭರತ ಭುವಿಯ ಯೋಗ

ಯೋಗದ ತಾಣ ಸಿದ್ಧಿಯ ಯೋಗ

ಸಿದ್ಧ ಪುರುಷರ ಸಿದ್ಧ ಹಸ್ತದಲ್ಲಿ

ಆರೋಗ್ಯ ಭಾಗ್ಯವೇ ಅಡಗಿಹುದಲ್ಲಿ

ತನು- ಮನದ ಸಕಲ ಸೌಖ್ಯವು

ಮನಜನಿಗದು ಬಹು ಮುಖ್ಯವು

ನರನಾಡಿಗಳಲ್ಲಿ ಹರಿವ ನವಚೇತನ

ಆರೋಗ್ಯ ಭಾಗ್ಯಕ್ಕೆ ಸಿರಿ ಸಂಚಲನ

ಅಂಗ- ಭಂಗಿಯಲ್ಲಿ ವಿನೂತನ....

ಭರತ ಭುವಿಯು ಪುಣ್ಯದ ತವರು

ಯೋಗ ಸಿದ್ಧಿ ಸಾಧನೆಯಲ್ಲಿ ಹೆಸರು

ಸಪ್ತ ನದಿಗಳ, ಸಪ್ತ ಋಷಿಗಳ ತಾಣ

ವೇದ,ಪುರಾಣ, ಇತಿಹಾಸದ ವೀಣಾ

ಯೋಗ ಸಿದ್ಧಿಯು- ಮನವು ಶುದ್ಧಿಯು

ಅರಿತು ಬಾಳಲು ಇರಲಿ ಬುದ್ಧಿಯು

ಅಂತರರಾಷ್ಟ್ರೀಯ ಯೋಗ ದಿನವಿಂದು

ಸುಯೋಗ ತಂದಿತ್ತಿರು ಜನನಾಯಕನಿಂದು

ವಿಶ್ವ ಜನಪ್ರಿಯ ಕಾಯಕ ಯೋಗಿ

ಭರತ ಭುವಿಯ ಯೋಗಾ ಯೋಗ

ಯೋಗ ನಿದ್ರೆಯಲಿ ವಿಶಾಲ ಬ್ರಹ್ಮಾಂಡ

ಯೋಗಾ ಯೋಗದಲ್ಲಿ ಆರೋಗ್ಯ ಕಂಡ

ಸುಯೋಗದಲ್ಲಿಂದು ಯೋಗ ಪ್ರಖ್ಯಾತ

ಜಗತ್ತಿಗೆ ಯೋಗ ಕೊಡುಗೆಯಲ್ಲಿ ಭಾರತ. 

-ವೀಣಾ ಕೃಷ್ಣಮೂರ್ತಿ, ದಾವಣಗೆರೆ

 

ಚಿತ್ರ್