ರಂಗಿನೋಕುಳಿ
ಕವನ
ರಂಗ ನಿನ್ನ ಸಂಗದಿಂದ
ರಾಧೆ ಬಾಳು ಪಾವನ
ದೇವ ನಿನ್ನ ನಾಮ ಸ್ಮರಣೆ
ಎಂಥ ಸೊಗಸು ಜೀವನ
ಮರಳುಗಾಡಿನಲ್ಲಿ ನಡೆಯೆ
ದಾಹ ಎನಿಸಲಾರದು
ದಟ್ಟ ಅಡವಿ ನಡುವೆ ಸಿಲುಕೆ
ಭಯವು ಇನಿತು ಕಾಡದು
ಭೂಮಿಯಲ್ಲಿ ನನ್ನ ಬಾಳು
ನೀನು ಇತ್ತ ಬಳುವಳಿ
ನಿನ್ನ ಕೂಡಿ ಸುಖವ ಪಡೆವೆ
ಆಡಿ ರಂಗಿನೋಕುಳಿ
ಕರುಣೆ ಕಿರಣ ಹರಿಸು ಹರಿಯೆ
ಪೊರೆಯೊ ಭಕ್ತ ಬಾಂಧವ
ನಿತ್ಯ ನಿನ್ನ ಸ್ಮರಣೆ ಗೈವೆ
ಕಾಯೊ ದೇವ ಮಾಧವ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
