ರಕ್ತದಾನ ಶಿಬಿರ
ಕರ್ನಾಟಕ ರಕ್ಷಣಾ ವೇದಿಕೆಯು ನಾಡು, ನುಡಿಯ ಹಿತಕ್ಕಾಗಿ ಹೋರಾಟ ಮಾಡುತ್ತಲೇ ಬಂದಿದೆ. ಹಾಗೆಯೆ, ಸಮಾಜದ ಒಳಿತಿನ ದೃಷ್ಟಿಯಿಂದ ಸಾಮೂಹಿಕ ಮದುವೆ, ಹೊಲಿಗೆ ಯಂತ್ರ ವಿತರಣೆ, ಆಂಬ್ಯುಲನ್ಸ್ ವಿತರಣೆ, ರಕ್ತ ದಾನ ಶಿಬಿರ, ನೇತ್ರ ದಾನ ಶಿಬಿರ ಇತ್ಯಾದಿ ಕಾರ್ಯಕ್ರಮಗಳನ್ನು ಕೂಡ ಮಾಡುತ್ತಾ ಬಂದಿದೆ.
ಜೂನ್ 10 ರಂದು ರಾಜ್ಯವ್ಯಾಪಿ ರಕ್ತಧಾನ ಶಿಬಿರವನ್ನು ಕ.ರ.ವೇ. ಹಮ್ಮಿಕೊಂಡಿದೆ. ಈ ರಕ್ತದಾನ ಶಿಬಿರವು ಏಕಕಾಲಕ್ಕೆ ಬೆಂಗಳೂರು ಮತ್ತು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ನಡೆಯುತ್ತದೆ. ಬೆಂಗಳೂರಿನಲ್ಲಿ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9:00 ಘಂಟೆಯಿಂದ ಸಂಜೆ 6:00 ಘಂಟೆಯ ವರೆಗೂ ನಡೆಯುತ್ತದೆ. ಹಾಗೆಯೆ ಪ್ರತಿ ಜಿಲ್ಲೆಯಲ್ಲೂ ಆಯಾ ಜಿಲ್ಲೆಯ ಆಸ್ಪತ್ರೆಗಳಲ್ಲಿ ನಡೆಯುತ್ತದೆ. ಈ ರಕ್ತದಾನ ಶಿಬಿರದಲ್ಲಿ 10,000 ಕ್ಕೂ ಹೆಚ್ಚು ಬಾಟಲಿ ರಕ್ತವನ್ನು ಶೇಖರಿಸುವ ಉದ್ದೇಶವಿದೆ. ಅದಕ್ಕಾಗಿ ಸಾವಿರಾರು ಕ.ರ.ವೇ ಕಾರ್ಯಕರ್ತರು ಮತ್ತು ಹಿತೈಷಿಗಳು ಬಂದು ರಕ್ತದಾನ ಮಾಡಲಿದ್ದಾರೆ. ನೀವುಗಳು ಸಹ ಅಲ್ಲಿಗೆ ಬಂದು ರಕ್ತದಾನದಲ್ಲಿ ಪಾಲ್ಗೊಂಡು ಜೀವ ಉಳಿಸುವ ಕಾರ್ಯಕ್ರಮದಲ್ಲಿ ಕೈಜೋಡಿಸಿ.