ರಕ್ತದೋಕುಳಿ

ರಕ್ತದೋಕುಳಿ

ಕವನ

ಜಾತಿ ಧರ್ಮದ ಹೆಸರಲಿ

ಇದೆಂಥಾ ಹಾವಳಿ

ಯಾಕೀತರ ಹೋರಾಟ 

ಬಿಸಿರಕ್ತದೋಕುಳಿ

 

ಯಾರದೋ ಜೀವ 

ಇನ್ನಾರದೋ ಕನಸು

ಕಮರುತಿದೆ ಮತ್ತಾರದೋ

ಸ್ವಾರ್ಥ ದಳ್ಳುರಿಯಲಿ

 

ಕಣ್ಮುಚ್ಚಿ ಬಿಡುವುದರೊಳಗೆ

ಎಲ್ಲವೂ ಅದಲು ಬದಲಾಗಬಾರದೇ??

ಮತಾಂಧಕಾರ ತೊಡೆದು 

ಎಲ್ಲರೂ ಒಂದಾಗಬಾರದೇ??

 

ಜಾತಿ ಧರ್ಮದ ಅಮಲು ಹತ್ತಿಸಿ

ಮೆರೆಸುವವರ ಸಂತಾನವೊಂದೂ

ಧರ್ಮಕ್ಕಾಗಿ ಹೋರಾಡಿದ್ದು 

ನಾ ಕಾಣಲಿಲ್ಲ..

 

ನೆತ್ತರೆಲ್ಲ ಬಿಸಿಯೇರುವಂತೆ

ಮಾತಾಡಿ ಪ್ರಚೋದಿಸಿದವರೆಂದೂ

ಧರ್ಮಕ್ಕಾಗಿ ಜೈಲು ಸೇರಿದ್ದೂ 

ನಾ ಕಾಣಲಿಲ್ಲ..

 

ಇಂದು ನಡೆಯುವುದೆಲ್ಲ

ಮಂಗನ ನ್ಯಾಯ..

ಅರ್ಥ ಆಗುವುದರೊಳಗೆ 

ಒಬ್ಬೊಬ್ಬರೇ ಮಾಯ ಮಾಯ..

 

-ರೇಷ್ಮಾ ಹೊನ್ನಾವರ.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್