ರಕ್ಷಾಬಂಧನದ ಕುರಿತಾದ ಕವನಗಳು

ರಕ್ಷಾಬಂಧನದ ಕುರಿತಾದ ಕವನಗಳು

ಕವನ

ರಕ್ಷಾ ಬಂಧನ

ಸಹೋದರ ಸಹೋದರಿಯರ ಹಬ್ಬ

ಭರವಸೆಯ ಬೆಳಕು ನೀಡುವ ಹಬ್ಬ

 

ದ್ರೌಪದಿಯು ತಂದ ಆಚರಣೆ

ಶ್ರೀಕೃಷ್ಣ ನೀಡಿದ ಸಂರಕ್ಷಣೆ

ಅಣ್ಣ ತಂಗಿಯ ಬಾಂಧವ್ಯ

ಜನುಮ ಜನುಮದಲ್ಲಿಯೂ ನವ್ಯ

!!ಸಹೋದರ ಸಹೋದರಿಯರ ಹಬ್ಬ!!

 

ತವರಿನ ಸಿರಿ ಸಹೋದರಿ

ಸಹೋದರನ ಮುದ್ದು ಬಂಗಾರಿ

ಬಯಸುವಳು ತಂಪಾಗಿರಲೆಂದು ತನ್ನ ತೌರೂರು

ಹರಸುವಳು ಹಿತವಾಗಿರಲೆಂದು ತನ್ನ ಹೆತ್ತವರು 

ಒಡಹುಟ್ಟಿದವರು

!!ಸಹೋದರ ಸಹೋದರಿಯರ ಹಬ್ಬ!!

 

ರಕ್ಷಾ ಬಂಧನದ ದಿನದಂದು

ಆಶೀರ್ವಾದ ಬೇಡುವಳಿಂದು

ತನ್ನ ರಕ್ಷಣೆಯ ಹೊರೆ ಒಡಹುಟ್ಟಿದವರ ಮೇಲೆ

ಒಡಹುಟ್ಟಿದವರ ಪ್ರೀತಿ ಸಹೋದರಿಯ ಮೇಲೆ

!!ಸಹೋದರ ಸಹೋದರಿಯರ ಹಬ್ಬ!!

 

-ತುಂಬೇನಹಳ್ಳಿ ಕಿರಣ್ ರಾಜು ಎನ್

***

ರಕ್ಷಣೆ ಕೊಡುವ ಬಂಧನ

ರಕ್ಷಾಬಂಧನ ಇದು ರಕ್ಷಾಬಂಧನ

ರಕ್ಷಣೆ ಕೊಡುವ ಬಂಧನ

ಅಣ್ಣ ತಂಗಿಯರ ಬಾಂಧವ್ಯ

ಬೆಸೆಯುವ ಈ ಬಂಧನ

 

ಪ್ರೀತಿಯಿಂದ ಹರಿಸಿ

ನೋವನ್ನೆಲ್ಲಾ ಮರೆಸಿ

ಸಹನೆ ಸಹಕಾರ ತೋರಿಸಿ

ಪ್ರೇಮ ಶಿಖರ ಏರಿದ ರಕ್ಷಾಬಂಧನ

 

ಭಾರತೀಯ ಸಂಸ್ಕೃತಿ ಉಳಿಸಿ

ಘನತೆ ಗೌರವ ಹೆಚ್ಚಿಸಿ

ದ್ವೇಷ ಅಸುಯೇ ಅಳಿಸಿ

ಭ್ರಾತೃತ್ವ ಸೌಹಾರ್ದತೆ ತರುವ ಬಂಧನ

 

ಅಣ್ಣ ತಂಗಿಗೆ ಕೊಟ್ಟನು ಆಹ್ವಾನ

ತಂಗಿ ಬಯಸಿತು ತವರು ಸಿರಿಯನ್ನು

ಆಗ ಇಬ್ಬರಿಗೆ ಸಿಗುವುದು ಸನ್ಮಾನ

ದೇವರಿಗೆ ನಾವು ಮಾಡುವೆವು ಗುಣಗಾನ

 

ಅಣ್ಣನಿಗೆ ತಂದ ಹಿರಿಮೆ

ತಂಗಿಗೆ ಸಿಕ್ಕ ಗರಿಮೆ

ಅಣ್ಣತಂಗಿಯರ ಒಲುಮೆ

ಚರಿತ್ರೆಯಲ್ಲಿ ಉಳಿದಿದೆ ಪುರಾವೆ

 

-ಶ್ರೀ.ಎಚ್.ವ್ಹಿ.ಈಟಿ, ಸಾ.ನರೇಗಲ್ಲ 

 

ಚಿತ್ರ್