ರಕ್ಷಾ ಬಂಧನ

Submitted by Shreerama Diwana on Mon, 08/03/2020 - 14:56
ಬರಹ

ರಕ್ಷಾಬಂಧನದ ಕುರಿತು ಒಂದು ಗಝಲ್

ಭಾವಗಳ ಪ್ರೀತಿಯ ಉನ್ಮಾದದಲಿ

ತೇಲಿಸಿದೆ ಈ ರಕ್ಷಾ ಬಂಧನ|

ನೋವು ನಲಿವುಗಳ ಸಮ್ಮಿಲನದಲಿ

ಬೆರೆಸಿದೆ ಈ ರಕ್ಷಾ ಬಂಧನ||

 

ಅನುಜೆಯ ಭಾತೃ ವಾತ್ಸಲ್ಯದಲಿ

ಹೃದಯವ ಸೆಳೆದಿಹುದು|

ತನುವಿನ ಗ್ಲಾನಿಯನು ಒಲವಿನಲಿ

ಮರೆಸಿದೆ ಈ ರಕ್ಷಾ ಬಂಧನ||

 

ಸುಮದ ಪರಿಮಳದ ಸೌರಭದಲಿ

ಆಹ್ಲಾದಿಸುವ ಚಣವದು|

ತಮವ ಸರಿಸುವ ದಿವ್ಯಪ್ರಭೆಯಲಿ

ಹೊಳೆಸಿದೆ ಈ ರಕ್ಷಾ ಬಂಧನ||

 

ಖುಷಿಯ ಸೋದರಿಯು ರಕ್ಷೆಯಲಿ

ಇರುತಿಹ ದಿನವಿಂದು|

ಋಷಿಗಳ ತಪದಂತೆ ಪುಣ್ಯದಲಿ

ಲಭಿಸಿದೆ ಈ ರಕ್ಷಾ ಬಂಧನ|

 

ಸಾಗರದ ಮುತ್ತಂತೆ ಪ್ರಜ್ವಲಿಸಲಿ

ಸೋದರಿಯ ಪ್ರೇಮವದು|

ರಾಗಗಳ ಸುಧೆಯದು ಅಭಿನವನಲಿ

ಆಲಿಸಿದೆ ಈ ರಕ್ಷಾ ಬಂಧನ.||

 

ಶಂಕರಾನಂದ ಹೆಬ್ಬಾಳ 

 

ಚಿತ್ರ್