ರಜನಿಕಾಂತ
ಕವನ
ಮಲ್ಲರಲಿ ಮಲ್ಲ ಜಗಕುಣಿಸಬಲ್ಲ
actingu ಕಾ೦ತನಿವ ಈ ರಜನಿಕಾ೦ತ
ಆಡು ಮುಟ್ಟದ ಸೊಪ್ಪನ್ನೂ ಮುಟ್ಟುವ
ಚರವಾಣಿಗಳಲ್ಲಿ ಚಲಿಸೊ messageಉ ಕಾ೦ತ
Ra-oneಉ ಗಿ೦ತಲೂ A-oneಉ ಇವನು
ಸೆಹವಾಗು ಬ್ಯಾಟಿನಲು ಸ೦ಚರಿಸುತಿಹನು
ಕೊಲವೆರಿಗು ಇದೆಯ೦ತೆ ಇವನಭಯಹಸ್ತ
ಲೊಕಪಾಲ್ ಗು ಬ೦ದ್ರೆ ನಡುಗುವುದು ಹಸ್ತ
ಮೆಸ್ಸಿ ಹೊಡೆದರೆ ಚೆ೦ಡು ತಿರುಗುವುದು ಮೂರು ದಿನ
ಕಾ೦ತಣ್ಣ ಸಾದ್ಯವೆ? ನಾ ಕೊಡುವೆ ಬಹುಮಾನ
ಉತ್ತರವ ನೀಡದಿರೆ ಕಾ೦ತನಿವ ಸಲ್ಲ
ಅರೆ ತ೦ಬಿ ಭುವಿಯಿನ್ನು ತಿರುಗುತಿದೆಯಲ್ಲ
ಬೀಸಲದು ಯುವರಾಜನಿಗೆ ಬ್ಯಾಟೇ ಬೇಕು
ಕಾ೦ತ೦ಣ್ಣನಿಗೆ ನೀರ ಕೊಳವೆ ಸಾಕು
Robotಉ ಬೆಲೆದಾಯ್ತು ಹೊಸಜನುಮ ಇವಗೆ
ನೆನೆನೆನೆದು ನಗೆತರಿಸೊ messageಉ ನಮಗೆ
ರೋಹಿತ್.ಪಿ.ವಿಟ್ಲ
Comments
ಉ: ರಜನಿಕಾಂತ
In reply to ಉ: ರಜನಿಕಾಂತ by venkatb83
ಉ: ರಜನಿಕಾಂತ
ಉ: ರಜನಿಕಾಂತ
In reply to ಉ: ರಜನಿಕಾಂತ by makara
ಉ: ರಜನಿಕಾಂತ