ರಜನಿ ಹಂಗಾಮ..

ರಜನಿ ಹಂಗಾಮ..

ಒಮ್ಮೆ ರಜನಿಕಾಂತ್ ಬೆಳಿಗ್ಗೆ ವಿಹಾರಕ್ಕೆಂದು ಹೊರಟರು. ಒಂದು ಗಂಟೆಯ ನಂತರ ಪೋಲಿಸ್ ಅವರನ್ನು ಅರೆಸ್ಟ್ ಮಾಡಿದರು. ಯಾಕೆ?

ಯಾಕೆಂದರೆ ಅವರು ವೀಸ ಇಲ್ಲದೆ ಅಮೆರಿಕ ಗೆ ನಡೆದುಕೊಂಡು ಬಂದು ಬಿಟ್ಟಿದ್ದರು.

 

ಒಮ್ಮೆ ರಜನಿಕಾಂತ್ ಅವರು ಒಂದು ದಿನ ಪೂರ್ತಿ ಶಾಲೆಗೆ ಬರಲಿಲ್ಲ. ಅಂದಿನಿಂದ ಆ ದಿನವನ್ನು ಭಾನುವಾರವೆಂದು ಘೋಷಿಸಲಾಯಿತು.

ರಜನಿಕಾಂತ್ ತಮ್ಮ ಚಾಲನಾ ಪರವಾನಗಿಯನ್ನು ತಮ್ಮ ವಯಸ್ಸು ೧೬ ಸೆಕೆಂಡ್ ಆಗಿದ್ದಾಗ ಪಡೆದರು.

ರಜನಿಕಾಂತ್ ಅವರು ತಮ್ಮನ್ನು ತಾವು ಮಲಗಿದ್ದಾಗ ನೋಡಬಲ್ಲರು

ಈ ಬಾರಿಯ ರಜನಿಕಾಂತ್ ಅವಾರ್ಡ್ ಹೋಗುತ್ತಿದೆ ಆಸ್ಕರ್ ಗೆ....

ರಜನಿಕಾಂತ್ ಜಡ್ಜ್ ಗೆ ತೀರ್ಪನ್ನು ಕೊಡಬಲ್ಲರು..

ರಜನಿಕಾಂತ್ ಮೂರನೇ ಅಂಪೈರ್ ಗೆ ಔಟ್ ಎನ್ನಬಲ್ಲರು..

ರಜನಿಕಾಂತ್ ಅವರು ಭಾರತದ ಏಳು ಶಾಲೆಗಳಲ್ಲಿ ತಮ್ಮ ಪ್ರೈಮರಿ ತರಗತಿಗಳನ್ನು ಓದಿದರೂ. ಆ ಏಳು ಶಾಲೆಗಳೇ ಭಾರತದ ಇಂದಿನ IIT ಗಳು.

ನಾಸಾ ಮುಚ್ಚಿ ಹೋಯಿತು ಯಾಕೆ? ಯಾಕೆಂದರೆ ರಜನಿಕಾಂತ್ ದೀಪಾವಳಿಗೆಂದು ಎಲ್ಲ ರಾಕೆಟ್ ಗಳನ್ನೂ ಖರೀದಿಸಿಬಿಟ್ಟರು

ರಜನಿಕಾಂತ್ ಒಮ್ಮೆ ಒಂದು ಚಿಕ್ಕ ಅಸ್ವಸ್ಥ ಮಗುವಿಗೆ ಒಂದು ಹನಿ ರಕ್ತ ದಾನ ಮಾಡಿದ್ದರು. ಆ ಮಗುವೆ ಇಂದು ದಿ ಗ್ರೇಟ್ ಖಾಲಿ ಆಗಿರುವುದು.

ಈಜಿಪ್ಟ್ ನಲ್ಲಿರುವ ಪಿರಮಿಡ್ ಗಳು..ರಜನಿಕಾಂತ್ ಶಾಲೆಯಲ್ಲಿ ಆಟವಾಡಲು ಮಾಡಿದ್ದ ಮಾದರಿಗಳು

Comments