ರಜೆಯ ಮಜ (ಮಕ್ಕಳ ಕವನ)
ಕವನ
ರಜೆಯು ಬರಲು ಶಾಲೆಗೆ
ಪುಟ್ಟಿ ಹೊರಟಳೂರಿಗೆ
ಅಜ್ಜಿ ಮನೆಯ ಹಳ್ಳಿಗೆ
ಮಲೆನಾಡಿನ ಮೂಲೆಗೆ.
ಅತ್ತೆ ಮಾವ ಪುಟ್ಟಪಾಪ
ಅಜ್ಜಿ ಕಂಡರಾಸೆಯು
ಅಕ್ಕ ಅಣ್ಣ ಎಲ್ಲ ಸೇರಿ
ರಜದಿ ಕುಣಿಯೆ ಇಷ್ಟವು.
ಆಟೋ ರೈಲು ಬಸ್ಸು
ದೂರ ಪಯಣ ಸುಸ್ತು
ತಿಂದು ಅಜ್ಜಿ ಕೈಯ ತುತ್ತು
ನಿದ್ದೆ ಬಂತು ಮಸ್ತು.
ಹಾಡುತಿರಲು ಹಕ್ಕಿ ಕೊರಳು
ಸುಪ್ರಭಾತವಾಯಿತು
ಬೆಣ್ಣೆ ರೊಟ್ಟಿ ಜೋನಿಬೆಲ್ಲ
ತಿಂದು ಹೊಟ್ಟೆ ತುಂಬಿತು.
ಹಂಡೆ ತುಂಬ ನೀರು
ಎರೆದು ದೇಹ ಹಗುರು
ಆಟಕೆಲ್ಲಾ ತಯಾರು
ಪುಟ್ಟಿ ತುಂಬ ಜೋರು.
ಆಟ ಜಗಳ ಮುದ್ದುಮಾತು
ಹೊಟ್ಟೆ ತುಂಬ ತಿನಿಸು
ಬಾರದಿನ್ನು ಇಂಥ ಮಜವು
ಮುಗಿದೆ ಹೋಯ್ತು ರಜವು.
Comments
ಉ: ರಜೆಯ ಮಜ (ಮಕ್ಕಳ ಕವನ)