ರಟ್ಟಕೂಟರ ಹೊತ್ತಿನಲ್ಲಿ ತೆಂಕು, ಬಡಗು ಕನ್ನಡದ ಬಗೆಗಳು
ಬರಹ
ಕವಿರಾಜಮಾರ್ಗವನ್ನು ನೆಗೞಿರುವ ಸಿರಿವಿಜಯನು ಹೇಳಿರುವ ಹಾಗೆ ತೆಂಕು, ಬಡಗು ಕನ್ನಡದಲ್ಲಿ ರಟ್ಟಕೂಟರ ಹೊತ್ತಿನಲ್ಲೂ ಬೇರೆತನಗಳಿದ್ದವು.
ತೆಂಕು (ದಕ್ಶಿಣ)
----------
ತರಿಸುವೆನ್
ಇರಿಸುವೆನ್
ಬಡಗು( ಉತ್ತರ)
---------
ತರಿಪೆನ್
ಇರಿಪೆನ್
ಬಡಗಿಗೂ ಬಡಗು( ಉತ್ತರೋತ್ತರ)
-----------------
ತರಿಪ್ಪೆನ್
ಇರಿಪ್ಪೆನ್
ಈ ಮೇಲಿನ ಕಟ್ಟಳೆಗೆ ಹೊರತು(exception) ಅಂದರೆ ತೆಂಕು,ಬಡಗು ಎರಡರಲ್ಲೂ ಒಂದೇ ತೆರ ಇದ್ದ ಪದಗಳು:-
ಪರಸುವೆನ್ (ಹರಸುವೆನು)
ಬೆರಸುವೆನ್
ಯಾಕಂದ್ರೆ ಇವುಗಳಲ್ಲಿ 'ಇಸು' ಹಿನ್ನೊರೆ(ಪ್ರತ್ಯಯ) ಇಲ್ಲ. ಬೇರು ಪದದಲ್ಲೇ 'ಸು' ಇದೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ