ರಟ್ಟು

ರಟ್ಟು

ಬರಹ

ರಟ್ಟು_೧ (ನಾಮಪದ) [ತೆಲುಗು: ರೆಟ್ಟಿ, ರೆಟ್ಟು]
೧. ಎರಡೆಳೆಗಳನ್ನು ಜೊತೆಯಾಗಿ ಹಾಕಿಕೊಂಡು ನೆಯ್ದ ದಪ್ಪಬಟ್ಟೆ; ಒರಟು ಬಟ್ಟೆ
೨. ಪುಸ್ತಕಕ್ಕೆ ಹಾಕುವ ದಪ್ಪಬಟ್ಟೆ ಅಥವಾ ದಪ್ಪಕಾಗದದ ಮೇಲುಹೊದಿಕೆ; ಬೈಂಡು
೩. ಪುಸ್ತಕವು ಕೊಳೆಯಾಗದಂತಿರಲು ಮೇಲೆ ಹಾಕುವ ಕಾಗದದ ಹೊದಿಕೆ

ರಟ್ಟು_೨ (ನಾಮಪದ) [ತೆಲುಗು: ರಟ್ಟು]
ಯಾವುದಾದರೂ ವಿಷಯವನ್ನು ಬಹಿರಂಗ ಪಡಿಸುವಿಕೆ, -ಹೊರಗೆಡಹುವಿಕೆ, -ಪ್ರಕಟಿಸುವಿಕೆ
(ರಟ್ಟು ಮಾಡುವದಾಯತವಲ್ಲ ಹೆಣ್ಣೊಡಂಬಟ್ಟುದೆ ಸ್ಮರಕುಮಾರನಿಗೆ-ಮೋಹನತರಂಗಿಣಿ; ಸಾಕುಮಾಡಿರವ್ವ . . . ಭ್ರಷ್ಟಮಾತುಗಳನೆಷ್ಟೋ ಕಲ್ಪಿಸಿ ಪಟ್ಟುಪಟ್ಟಿಗೆ ರಟ್ಟುಮಾಡುವುದ-ಪುರಂದರದಾಸ; ಸಂಸಾರ ಗುಟ್ಟು ರೋಗ ರಟ್ಟು-ಗಾದೆ)

(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet