ರತ್ನಾ ಭಟ್ ಅವರ ಒಂದು ಗಝಲ್

ರತ್ನಾ ಭಟ್ ಅವರ ಒಂದು ಗಝಲ್

ಕವನ

ಜಗದ ತಮವ ಕಳೆವೆಯಾ ಕೃಷ್ಣಾ

ಮೊಗದಿ ಸಂತಸ ತರುವೆಯಾ ಕೃಷ್ಣಾ

 

ಜೀವನ ಮುದದಿ ಸದಾ ಸಾಗಿಸಲಾರೆಯಾ

ಹರಸಿ ಸನ್ಮಾರ್ಗವ ತೋರುವೆಯಾ ಕೃಷ್ಣಾ

 

ನಡೆನುಡಿ ಶುದ್ಧೀಕರಿಸಿ ತಿದ್ದಲಾರೆಯಾ

ಸದ್ಗುಣ ಗಳ ಮಳೆಯ ಸುರಿವೆಯಾ ಕೃಷ್ಣಾ

 

ನಲ್ಮೆಯ ಭಾವ ಮನದಲಿ ಬಿತ್ತೋಣವೇ

ಕ್ಷಮಿಸುತ ಸಂಸಾರದಿ ಬರುವೆಯಾ ಕೃಷ್ಣಾ 

 

ಉಣಿಸುತ ಸಿಹಿ ಮರೆಯೋಣ ಕಹಿಯನು

ಕ್ರೋಧವನು ತಣಿಸುತ ಬೆರೆವೆಯಾ ಕೃಷ್ಣಾ

 

ಶುಭದ ಆಕಾಂಕ್ಷೆ ಉತ್ತಮ ನಿಲುವಾಗಿದೆ

ಪದೋನ್ನತಿ ಗೊಳಿಸಿ ಸಲಹುವೆಯಾ ಕೃಷ್ಣಾ

 

ಸುತ್ತಲು ಮುತ್ತಿದೆ ಅಂಧಕಾರ ರತುನಾಳಿಗೆ

ಬದುಕಿನಲಿ ರಶ್ಮಿಯನು ಬೆಳಗುವೆಯಾ ಕೃಷ್ಣಾ

 

-ರತ್ನಾ ಭಟ್ ತಲಂಜೇರಿ

 

ಚಿತ್ರ್