ರತ್ನಾ ಭಟ್ ಅವರ ಒಂದು ನ್ಯಾನೋ ಕಥೆ

ರತ್ನಾ ಭಟ್ ಅವರ ಒಂದು ನ್ಯಾನೋ ಕಥೆ

ಹುತಾತ್ಮ

ಬೆಳಗಿನ ತಿಂಡಿಯ ಗಡಿಬಿಡಿಯಲ್ಲಿದ್ದ ವನಜಮ್ಮನ ಕಿವಿಗೆ ದೂರವಾಣಿಯ ಸದ್ದು ಎಚ್ಚರಿಸಿತು. ಸೆರಗಲ್ಲಿ ಕೈ ಒರೆಸುತ್ತಾ ಬಂದು, ಯಾರು ಎಂದು ಕೇಳಿದಾಗ, ಅತ್ತಕಡೆಯಿಂದ ಹೇಳಿದ ಸುದ್ಧಿ ಕೇಳಿ,ಹಾಗೆಯೇ ಕುಸಿದು ಬಿದ್ದುಬಿಟ್ಟರು.

ಸ್ವಲ್ಪ ಹೊತ್ತಿನಲ್ಲಿ ಚೇತರಿಸಿಕೊಂಡವರು ಸೊಸೆಯನ್ನು ಕರೆದು ಸೂಕ್ಷ್ಮವಾಗಿ ವಿಷಯ ತಿಳಿಸಿದರು. ಮನಸ್ಸಿನಲ್ಲಿಯೇ, ಭಗವಂತ ತುಂಬು ಗರ್ಭಿಣಿಗೆ ಹೀಗೂ ಆಯಿತಲ್ಲ ಎಂದು ಮನಸ್ಸಿನಲ್ಲಿಯೇ ಮಮ್ಮಲ ಮರುಗಿದರು.

ಮಿಲಿಟರಿಯವರು ರಾಷ್ಟ್ರಧ್ವಜ ಹೊದೆಸಿದ ಪೆಟ್ಟಿಗೆಯನ್ನು ತಂದು ಮನೆಯ ಹೊರಜಗಲಿಯಲ್ಲಿರಿಸಿದಾಗ, ಒಮ್ಮೆ ಅತ್ತರೂ ಸಾವರಿಸಿಕೊಂಡು ತನ್ನ ಮುದ್ದು ಮಗ ಭರತನ ಮುಖವನ್ನು ನೋಡಿದರು.

ಗಡಿಯಲ್ಲಿ ಆದ ವಿಧ್ವಂಸಕ ಕೃತ್ಯದಲ್ಲಿ ವೀರಮರಣವನ್ನಪ್ಪಿದ, ದೇಶಕ್ಕಾಗಿ ಹುತಾತ್ಮನಾದವನ ಅಮ್ಮ ನಾನು ಎಂಬ ಹೆಮ್ಮೆಯಿಂದ ತಲೆಯೆತ್ತಿ ನೋಡಿ, ನನ್ನ ಇನ್ನೊಬ್ಬ ಮಗನನ್ನೂ ದೇಶಸೇವೆಗೆ ಕಳುಹಿಸುತ್ತೇನೆ ಎನ್ನುತ್ತಾ,"ಜೈ ಹಿಂದ್"ಎಂದು  ಹೇಳಿದರು.

   - ರತ್ನಾ ಭಟ್ ತಲಂಜೇರಿ