ರದ್ದಾಗೋಗಿದೆ ಗ್ಯಾಸಿನ ಕಾರ್ಡು
ಕವನ
ಸುಖಾಸುಮ್ನೆ ನೆಟ್ಟವಗೆ ದುಡ್ಕೊಡಕೆ
ರದ್ದಾಗೋಗಿದೆ ಗ್ಯಾಸಿನ ಕಾರ್ಡು
ಗ್ಯಾಸೆಜೆನ್ಸಿಯವಂದೇ ಹೋಗಿದೆಯಂದ್ರೆ
ಇನ್ನುಳಿದ ನಮ್ಮ ಪಾಡೇನು?
ಅಂತರ್ಜಾಲದಿ ನಂಬರ ನೋಡು
ದಾಖಲೆಯಿದ್ದರೂ ಒದ್ದಾಡು, ಅದ
ಸ್ಕ್ಯಾನ್ ಮಾಡ್ಸಿ ಮಾಡಪ್ಲೋಡು|1|
ಪೇಟೆಲೆಂತೂ ನೆಟ್ಟು ಕಷ್ಟವಲ್ಲ
ಹುಡುಗರ ಕೈಲಿನ ಮೊಬೈಲಲೆಲ್ಲಾ
ನಿಮಿಷಗಳಲೇ ಕೈಗೆಟುಕುವುದಲ್ಲಾ
ಮೂಲೆಯ ಹಳ್ಳಿಯ ಪಾಡೇನು?
ಸರಿ ಕರೆಂಟೇ ಇಲ್ಲ, ನೆಟ್ಟಿನ್ನೆಲ್ಲಿ?
ರದ್ದಾದಿ ಸುದ್ದಿ ತಿಳಿವ ಬಗೆಯೇನು?