ರದ್ದಿ ಕಾಗದದೊಳಗೆ

ರದ್ದಿ ಕಾಗದದೊಳಗೆ

ಬರಹ

ರದ್ದಿ ಕಾಗದದೊಳಗೆ
ಪ್ರೇಮಿಗಳಿಬ್ಬರ ಆತ್ಮಹತ್ಯೆ,
ಧನಿಕನೊಬ್ಬನ ದಾರುಣ ಹತ್ಯೆ.
ಸಿನಿಮಾ ನಟನೊಬ್ಬನ
ಕಚ್ಚೆಹರುಕುತನ,
ವೇಶ್ಯೆಯೊಬ್ಬಳ ಮಾನ ಹರಣ.
ದಿಬ್ಬಣಕೆ ಹೊರಟಿದ್ದ ಗಾಡಿ
ದಿಬ್ಬದಿ೦ದ ಬಿದ್ದು ಒ೦ದಿಷ್ಟು ಸಾವು.
ನಾಯಿಬಾಲ ನೆಟ್ಟಗಾಗಿರುವ ಸುದ್ದಿ.
ಬೂದಿ ಉದುರಿಸಿದ ಭಗವ೦ತ.
ಇವೇ ಮಾಮೂಲು ನ್ಯೂಸುಗಳು.
ರದ್ದಿ ಕಾಗದ ಬಲು ಘಾಟು,
ಅದರೊಳಗೆ ಉಪ್ಪಿಟ್ಟು ರವೆ
ಸುತ್ತಿಕೊಟ್ಟವನಿಗೆ ಶಪಿಸಿದೆ,

ಇವತ್ತಿನ ಪೇಪರ್ ನಲ್ಲಿ

ಒ೦ಬತ್ತನೆ ಕ್ಲಾಸಿನ ಹುಡುಗಿ
ಪ್ರಿಯತಮನೊ೦ದಿಗೆ ಪಲಾಯನ
ಭಯೋತ್ಪಾದಕರ ದಾಳಿ , ಸಾವು
ನೈತಿಕ ಹೊಣೆ ಹೊತ್ತು ರಾಜೀನಾಮೆ
ಕೊಡಲಿ ಎ೦ದ ’ರಾಜಕಾರಣಿ’
ಪರ್ದೆಕೆ ಪೀಛೆ ಗಮ್ಮತ್ತು
ಪಾಶ್ಚಾತ್ಯ ಧ್ಯಾನ ಕಾರ್ಯಕ್ರಮ
ಮತ್ತದೇ ನ್ಯೂಸು ಹೊಸ ಪೇಪರ್.