ರಮ್ಯ ಭಾವ

ರಮ್ಯ ಭಾವ

ಕವನ

ಅರುಣಕಾಲದ ಭವ್ಯ ನೋಟ 

ಉದಯಕಾಲದ ರಮ್ಯ ಮಾಟ 

ರವಿ ಉದಯದ ಸೌಮ್ಯ ಭಾವ

ಅಲೆ ಅಲೆಯಾಗಿ ಮೂಡುತಿದೆ

 

ಹೊಂಗಿರಣದ ಸುಂದರ ಜಾವ

ಮುಂಜಾನೆಯ ಮದುರ ಭಾವ

ಇಬ್ಬನಿಯ ನವಿರಾದ ತಾಣ 

ಅಲೆ ಅಲೆಯಾಗಿ ಮೂಡುತಿದೆ 

 

ಹೃದಯದಲಿ ತಂತಿ ಮೀಟಲು

ಎದೆಯಲಿ ಭಾವ ಹೊಮ್ಮಲು 

ಮನದಲಿ ಆಸೆ ಚಿಮ್ಮುತಲಿ 

ಅಲೆ ಅಲೆಯಾಗಿ ಮೂಡುತಿದೆ

 

ಹೊಳೆಯ ತಟದಲಿ ನವಿಲು ನಲಿದು

ಕುಣಿಯಲು ತನುವು ಪುಳಕಗೊಂಡು 

ಕಂಗಳು ತುಂಬಿದ  ನೇಸರ ಸೊಬಗು 

ಅಲೆ ಅಲೆಯಾಗಿ ಮೂಡುತಿದೆ 

 

ಚೆಲುವ ಸ್ನೇಹ ಒಲವ ಮೋಹ 

ಬಳಿಯೆ ಸುಳಿಸುಳಿದು ಮಿಂಚಲು 

ಹನಿಹನಿಯೆ ಮಳೆ ಬರಲು ನೆನಪು

ಅಲೆ ಅಲೆಯಾಗಿ ಮೂಡುತಿದೆ

 

-ಬಂದ್ರಳ್ಳಿ ಚಂದ್ರು, ತುಮಕೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್