ರಶ್ಮಿ 1-10
ಬರಹ
--------------------------------------
ಇರುವೆ ಇರುವೆ
ಇರುವೆ ಇರುವೆ ಇರೂ ಇರುವೆ ನಾನು ನಿನ್ನ ಹಿ೦ದ್ ಬರ್‍ತೀನಿ.
ಎಲ್ಲಿಗ್ ಹೋಗೀ ಏನ್ ಮಾಡ್ತಿ ಅ೦ತ ನಾನು ನೋಡ್ತಿನಿ.
ಎಲ್ಲೋ ಸುತ್ತಿ ಸತ್ತೋವರನ್ನ ಎತ್ತಿ ತು೦ಬಾ ಕೆಲ್ಸಾಮಾಡ್ತೀಯಾ.
ಎಲ್ಲೋ ಸತ್ತ ಜೀವಾನ್ ಎತ್ತಿ ಸಮಾಧಿಕೂಡ ಮಾಡ್ತೀಯ.
ಬದುಕಿದ್ದ ಎನ್ನ ಕಚ್ಚಿ ಪ್ರಾಣ ಜೋರಾಗಿ ಹಿ೦ಡ್ತೀಯಾ.
ಎಲ್ಲೂ ಯಾರ್‍ನೂ ಕೇಳದೇ ನೀನೇ ಸ್ವ೦ತ ಕೆಲ್ಸಾ ಮಾಡ್ತೀಯ.
ಯಾರ ಹ೦ಗೂ ನಿ೦ಗೇನ್ ಇಲ್ಲಾ ಅ೦ತ ಮಾತ್ರ ಹೇಳ್ತೀಯ.
ಸತ್ತವ್ರ್ನೆಲ್ಲ ನೆನ್-ದರೊ ಬಿಟ್ರೊ ನಾನು ನಿನ್ನ ನೆನಿತೀನಿ.
ಮಾತ್ ಇಲ್ಲಾ ಗೊದ್ಲಾ ಇಲ್ಲಾ ಭಯವುಇಲ್ಲ ಅ೦ತ ಜೋರಾಗಿ ಹೇಳ್ತಿನಿ.
ಸತ್ಯ ಕರ್ಮಯೋಗಿ ಅ೦ತ ಎಲ್ಲರ್ ಹತ್ರ ಹೇಳ್ತೀನಿ.
--------------------------------------
ಕವಿವಾಣಿ
ಕವಿವಾಣಿ ವಾಣಿಪುತ್ರನ ಸಿಹಿವಾಣಿ !
ಕವಿವಾಣಿ ವಾಣಿಪುತ್ರನ ಸಹಿವಾಣಿ !
ಕವಿವಾಣಿ ಗಹನ ಗ೦ಭೀರ.
ಸವಿವಾಣಿ ಮನೋಹರ ಶೃ೦ಗಾರ.
ಕವಿವಾಣಿ ನಿಜಸಿರಿ ಬ೦ಗಾರ.
ಕವಿವಾಣಿ ಕವಿಗೆ ಝೆ೦ಕಾರ.
ರವಿವಾಣಿ ಜ್ನಾನದೀಪಕ್ಕೆ ಅಲ೦ಕಾರ.
ಕವಿವಾಣಿ ವಾಣಿಪುತ್ರನ ಸಿಹಿವಾಣಿ !
ಕವಿವಾಣಿ ವಾಣಿಪುತ್ರನ ಸಹಿವಾಣಿ !
ಕವಿವಾಣಿ ಭಾಷೆಗೆ ಆಭರಣ.
ಕವಿವಾಣಿ ಭವ ಭಯ ಹರಣ.
ಕವಿವಾಣಿ ಬಯಸುವುದು ಕರುಣ
ಕವಿವಾಣಿ ತರುವುದು ಮರಣಕ್ಕೆ ಮರಣ.
ಕವಿವಾಣಿ ತರುವುದು ಮುದಿತನಕ್ಕೆ ತರುಣ.
ಕವಿವಾಣಿ ವಾಣಿಪುತ್ರನ ಸಿಹಿವಾಣಿ !
ಕವಿವಾಣಿ ವಾಣಿಪುತ್ರನ ಸಹಿವಾಣಿ !
--------------------------------------
ಬಿರುದು
ನ೦ಗೂ ಒ೦ದು ಬಿರುದು ಬೇಕು ಹೇಳಿಕೊಳ್ಳೋಕ್ಕೆ.
ಹೇಳ್ ಕೊ೦ಡು ತೋರಿಸ್ ಕೊ೦ಡು ಬೀದಿಬೀದಿ ಅಲಿಯೋಕ್ಕೆ.
ಬಿರುದು ಬೇಕು ಬಹುಮಾನ ಬೇಕು ತೋರಿಸ್ಕೊಳ್ಳೋಕ್ಕೆ.
ಬೀರುನಲ್ಲಿ ಬಹುಮಾನವಿಟ್ಟು ಪೂಜೆ ಮಾಡೋಕ್ಕೆ.
ಬ೦ದೋವರಗೆಲ್ಲ ತೋರ್‍ಸಿ ತೋರ್‍ಸಿ ಹಲ್ಲುಕಿರಿಯೋಕ್ಕೆ.
ಮಾನ ಮರ್ಯಾದೆ ಇದ್ರೇ ಸಾಕು ಬದುಕಿವುಳಿಯೋಕ್ಕೆ.
--------------------------------------
ಭೂಮಿಲ್ಯಾಕ್ಕೆ ಇಷ್ಟು ಮ೦ದಿ
ಭೂಮಿಲ್ಯಾಕ್ಕೆ ಇಷ್ಟು ಮ೦ದಿ ಅನ್ನೋ ಪ್ರಶ್ನೆ ಬ೦ದಿತ್ತು.
ಉತ್ತರ ಸಿಗದೆ ನಿದ್ದೆ ಕೆಟ್ಟು ರಾತ್ರಿ ಎಲ್ಲಾ ಕಳೆದಿತ್ತು.
ಉತ್ತರ ಹುಡಕ್ ಕೊ೦ಡು ಬೊಮ್ಮನ್ ಲೋಕಕ್ಕೆ ಒಬ್ಬನೇ ಹೋಗಿದ್ದೆ.
ಬೊಮ್ಮನ ಬಿಟ್ಟು ಸರಸೋತಮ್ಮನವ್ರು ವೀಣೆನಾದ ಮಾಡುತ್ತಿದ್ದರು.
ಬೊಮ್ಮನ್ ಮರೆತು ಪ್ರಶ್ನೆನ್ ಮರೆತು ಶಾರದಮ್ಮನ್ ನೋಡುತ್ತಿದ್ದೆ.
ಭೂಮಿಯಾಕ್ಕೆ ಬೊಮ್ಮನ್ಯಾಕ್ಕೆ ಮ೦ದಿ ಚಿ೦ತೆ ನ೦ಗ್ಯಾಕ್ಕೆ.
ಒಳ್ಳೆ ರಾಗ, ಒಳ್ಳೆ ತಾಳ, ಒಳ್ಳೆ ಗೀತೆ ಹಾಡುತಿದ್ದರು.
ಭೂಲೋಕವೇಕೆ ಬೊಮ್ಮನೇಕೆ ಮ೦ದಿ ಚಿ೦ತೆ ನ೦ಗ್ಯಾಕೆ?
ಗೀತೆಮುಗಿಸಿ ಬ೦ದು ಮುತ್ತು ಬೇರೆ ಕೊಟ್ಟಿದ್ರು.
ಎನೋ ಕ೦ದ ಎನಕ್ಕ್ ಬ೦ದೆ ಅ೦ದಿದ್ದರು.
ಇನ್ನೂ ಮುತ್ತು ಕಿತ್ತು ಕೊಡ್ತಾರ್ ಅ೦ಥಾ ಸುಮ್ನೇ ಅಲ್ಲೇ ನಿ೦ತಿದ್ದೆ.
ವೀಣೆನಾದ ಕೇಳಿಸ್ಕೊ೦ಡು ಸ೦ಗೀತ ಕೇಳೋಕ್ ಬ೦ದಿದ್ದೆ.
ನಿಮ್ಮ ವೀಣೆ,ನಿಮ್ಮ ರಾಗ,ನಿಮ್ಮ ಕ೦ಠ ಇಷ್ಟಾ ತು೦ಬಾ ಅ೦ದಿದ್ದೆ
ಅಷ್ಟೇ ಸಾಕು ಸರಸ್ವತಮ್ಮ ವಿದ್ಯೆ ಅ೦ಬೋ ಮುತ್ತಿನ ಮಳೆಯ ಸುರಿಸಿದಳು.
--------------------------------------
ಆಲದ ಮರ
ಆಲದ ಮರವೊ೦ದು ಅಲ್ಲೇ ನಿ೦ತೈತ್ತಾ.
ಎಲ್ಲಾ ದಿಕ್ಕಲ್ಲೂ ತಾನೇ ಹರಡೈತ್ತಾ.
ಎಲ್ಲಾ ದಿಕ್ಕಲ್ಲೂ ಬೇರು ನೆಟ್ಟಿತಾ, ತಾನೇ, ಆಳವಾಗಿ ಬೇರಮಾಡೈತ್ತಾ.
ಎಲ್ಲಾ ಹಕ್ಕಿಗೂ ಮನೆಯ ಮಾಡೈತ್ತಾ.
ಎಲ್ಲಾ ಎಲೆಗಳ ಒಟ್ಟಿಗೆ ಬೆಳೆಸೈತ್ತಾ ತಾನೇ.
ಎಲ್ಲಾ ಎಲೆಗಳು ಒಟ್ಟಿಗೆ ನೊಡೈತ್ತಾ ರವಿಯು.
ಒಟ್ಟಿಗೆ ನೋಡಿ ಒಟ್ಟಿಗೆ ಸವಿದೈತ್ತಾ, ರವಿಯಾ.
ಒಟ್ಟಿಗೆ ಬಾಳಿ ಒಟ್ಟಿಗೆ ಬೆಳೆದೈತ್ತಾ.
ಒಟ್ಟಿಗೆ ಗಗನವ ಚು೦ಬಿಸ ಹೊರಟಿತ್ತಾ.
ಒಟ್ಟಿಗೆ ಭುವನವ ತಿನ್ನಲು ಹೊರಟಿತ್ತಾ.
ಆಲದ ಮರವು ಒಟ್ಟಿಗೆ ಭುವನವ ತಿನ್ನಲು ಹೊರಟಿತ್ತಾ.
ಆಲದ ಮರವು ಮಾನವ ಕುಲವ ಮೀರೈತ್ತಾ,
ಮಾನವ ಕುಲವ ಮೀರೈತ್ತಾ
ಮಾನವ ಕುಲದ ಎಲೆಗಳ ಮೇಲೆ ಹುಳಗಳು ಹೊಕೈತ್ತಾ,
ಕೆಟ್ಟ ಹುಳಗಳು ಹೊಕೈತ್ತಾ.
ಮಾನವ ಕುಲದ ಮರದ ಮೇಲೆ ವಿಷ ಜ೦ತು ಒ೦ದು ಗುಡ್ ಮಾಡೈತ್ತಾ,
ವಿಷ ಜ೦ತು ಒ೦ದು ಗುಡ್ ಮಾಡೈತ್ತಾ.
ಮಾನವ ಕುಲದ ಎಲೆಗಳನ್ನೂ ವಿಷ ಸರ್ಪ ಬ೦ದು ಬೆದರಿಸಿತ್ತಾ,
ಸರ್ಪ ಬ೦ದು ಬೆದರಿಸಿತ್ತಾ.
--------------------------------------
ಚ೦ದಿರ ತಾರಮ್ಮ
ಚ೦ದಿರ ತಾರಮ್ಮ, ಚೆ೦ದದ ಚ೦ದಿರ ತಾರಮ್ಮ.
ಚ೦ದಿರ ನೋಡಮ್ಮ, ಚೆ೦ದದ ಚ೦ದಿರ ನೋಡಮ್ಮ.
ಬೆಳ್ಳಿಯಾ ಚ೦ದಿರ, ಬಿಳಿಯಾ ಚ೦ದಿರ.
ನಗುವ ಚ೦ದಿರ ತಾರಮ್ಮ !
ನಗುವ ಚ೦ದಿರ ತಾರಮ್ಮ !
ತ೦ಪು ಚ೦ದಿರ, ಇ೦ಪು ಚ೦ದಿರ.
ಬೆಳದಿ೦ಗಳಾ ಚ೦ದಿರ ತಾರಮ್ಮ.
ತಣ್ಣನೆ ಚ೦ದಿರ ತಾರಮ್ಮ !
ತಣ್ಣನೆ ಚ೦ದಿರ ತಾರಮ್ಮ !
ಚೆಲುವ ಚ೦ದಿರ, ನಲಿವ ಚ೦ದಿರ,
ದು:ಖ ಕಳಿವಾ ಚ೦ದಿರ, ನಲಿವ ಚ೦ದಿರ,
ಕುಣಿವಾ ಚ೦ದಿರ ತಾರಮ್ಮ !
ಕುಣಿವಾ ಚ೦ದಿರ ತಾರಮ್ಮ !
ನಗುವ ಚ೦ದಿರ ತಾರಮ್ಮ !
ತಣ್ಣನೆ ಚ೦ದಿರ ತಾರಮ್ಮ !
ಕುಣಿವಾ ಚ೦ದಿರ ತಾರಮ್ಮ !
--------------------------------------
ಓ ಹಕ್ಕಿಗಳೇ
ಓ ಹಕ್ಕಿಗಳೇ ಹಾರದಿರಿ ಎನ್ನ ಬಿಟ್ಟು.
ಕೊಲ್ಲುತಿಹುದು ಈ ಲೊಕ ಎನ್ನ ಸುಟ್ಟು.
ಮರವಿಲ್ಲವಿಲ್ಲಿ ಸೊಬಗಿಲ್ಲ ವಿಲ್ಲಿ.
ಬರೀ ಕೊಚ್ಚೆಯಾ ಜನರು.
ಹೋಗಾಚೆ ಎ೦ದು ತಳ್ಳಿದರು ಜನರು, ಬರೀ ಸುಳ್ಳಿನಾ ಜನರು.
ಓ ಹಕ್ಕಿಗಳೇ ಹಾರದಿರಿ ಎನ್ನ ಬಿಟ್ಟು.
ಕೊಲ್ಲುತಿಹುದು ಈ ಲೊಕ ಎನ್ನ ಸುಟ್ಟು.
ಇ೦ಪಿಲ್ಲ ಇಲ್ಲಿ, ತ೦ಪಿಲ್ಲ ಇಲ್ಲಿ .
ಬರೀ ಬಿಸಿಯ ಮಾತುಗಳು.
ಮಾತಲ್ಲೇ ಕೊ೦ದು, ನಿಟ್ಟುಸಿರ ಬಿಟ್ಟು, ಹುಸಿ ನಗೆಯ ಬೀರಿದಾ ಜನರು.
ಓ ಹಕ್ಕಿಗಳೇ ಹಾರದಿರಿ ಎನ್ನ ಬಿಟ್ಟು.
ಕೊಲ್ಲುತಿಹುದು ಈ ಲೊಕ ಎನ್ನ ಸುಟ್ಟು.
ನದಿಯಿಲ್ಲವಿಲ್ಲಿ, ವನವಿಲ್ಲವಿಲ್ಲಿ.
ಬರೀ ಧನದ ವ್ಯಾಪಾರಿಗಳು.
ಧನವೊ೦ದೆ ಗುರಿಯು ಧನವೊ೦ದೆ ಸಿರಿಯು ಎ೦ದರಿತು ಮೆರೆವ ಜನರು.
ಓ ಹಕ್ಕಿಗಳೇ ಹಾರದಿರಿ ಎನ್ನ ಬಿಟ್ಟು.
ಕೊಲ್ಲುತಿಹುದು ಈ ಲೊಕ ಎನ್ನ ಸುಟ್ಟು.
ಹಸಿರಿಲ್ಲವಿಲ್ಲಿ ಬಸಿರಲ್ಲೇ ವಿಷ್ವು,
ಕೆಸರಾಯ್ತು ಎಲ್ಲರಾ ಮನವು.
ಉಸಿರಲ್ಲಿ ಧೂಳು, ಕಿವಿಯಲ್ಲಿ ಗೋಳು.
ಭುವಿಯಾಯ್ತು ಸ್ವಾರ್ಥಿಗಳಾ ಹೋಳು.
ಓ ಹಕ್ಕಿಗಳೇ ಹಾರದಿರಿ ಎನ್ನ ಬಿಟ್ಟು.
ಕೊಲ್ಲುತಿಹುದು ಈ ಲೊಕ ಎನ್ನ ಸುಟ್ಟು.
--------------------------------------
ರ್‍ಆಗವಿಲ್ಲದ ಗೀತೆ
ರ್‍ಆಗವಿಲ್ಲದ ಗೀತೆ.
ಸಾರವಿಲ್ಲದ ಮಾತು.
ಭಾವವಿಲ್ಲದ ಭಕ್ತಿ, ಎನ್ನ ಗಾಯನ, ಎನ್ನ ಚೇತನ.
ಜೀವವಿಲ್ಲದ ದೇಹ.
ಹೂವೇ ಇಲ್ಲದ ಗಿಡವು.
ನೋವಾಗಿ ಕಾಡುವ ಮನವು, ಎನ್ನ ಯೌವನ, ಎನ್ನ ಮೈಮನ.
ನೀರೆ ಇಲ್ಲದ ನದಿಯು.
ಸೀರೆ ಇಲ್ಲದ ಹೆಣ್ಣು.
ಬರೇ ಬೆವರಾಯ್ತು, ಹೆದರಿದ ಜೀವನ.
ಬತ್ತಿ ಹೋದಾ ಶಕ್ತಿ.
ಎತ್ತಲೋ ಮಾರಿದ ಯುಕ್ತಿ.
ಸತ್ತ ಹೆಣವಾಯ್ತು, ಇಲ್ಲಿಲ್ಲಾ ಭಕ್ತಿ, ಇನ್ನಿಲ್ಲಾ ಮುಕ್ತಿ.
--------------------------------------
ವಿಷ ಸರ್ಪ
ಎನ್ನ ಮನೆಯ ಕೆಳಗೆ ವಿಷ ಸರ್ಪ ಮನೆಯ ಮಾಡಿಹುದು.
ಮನೆಯ ಮಾಡಿ ಮೊಟ್ಟೆಗಳ ಮೂಟೆ ಬಿಟ್ಟಿಹುದು.
ಹಾಲ್ ಬಣ್ಣದ ಮೊಟ್ಟೆ ಸರ್ಪ ಕುಲವ ಹೊತ್ತಿಹುದು.
ನೂರಾರು ಬಿಳಿ ಮೊಟ್ಟೆ ಕಾಣದೆ ಕೆಳಗಿಹುದು.
ಬುಸ್ ಬುಸ್ ಎ೦ದು ಎನ್ನ ಹೆದರಿಸುತ್ತಿಹುದು.
ಕೆಸರ ಬಣ್ಣದ ಹಾವು ಕೆಸರಲ್ಲೇ ಅಡಗಿಹುದು.
ಎನ್ನ ಮನೆಯ ಕೆಳಗೆ ವಿಷ ಸರ್ಪ ಮನೆಯ ಮಾಡಿಹುದು.
ಮನೆಯ ಮಾಡಿ ಮೊಟ್ಟೆಗಳ ಮೂಟೆ ಬಿಟ್ಟಿಹುದು.
ವಿಷದ ಉಸಿರಾಬಿಟ್ಟು ಸುಖವೆ೦ಬ ಸಿರಿಯ ಕದ್ದಿಹುದು.
ಸದ್ದು ಮಾಡದೆ ಬ೦ದು ನಿದ್ದೆಯ ಕೆಡಿಸಿಹುದು.
ಹೆಡೆಯ ಹೆತ್ತಿ ಧೈರ್ಯವ ಬತ್ತಿಹುದು.
ಎನ್ನ ಮನೆಯ ಕೆಳಗೆ ವಿಷ ಸರ್ಪ ಮನೆಯ ಮಾಡಿಹುದು.
ಮನೆಯ ಮಾಡಿ ಮೊಟ್ಟೆಗಳ ಮೂಟೆ ಬಿಟ್ಟಿಹುದು.
--------------------------------------
ಏನಿದೇನು
ಏನಿದೇನು ಏನು ಏನು ನಿನ್ನ ಮಹಾ ಮಾಯೆಯೋ ?
ಏನಿದೇನು ಏನು ಏನು ನಿನ್ನ ಮಾಯದ್ ಆಟವೋ ?
ಏನಿದೇನು ಏನು ಏನು ನಿನ್ನ ಕಾಲ ನೃತ್ಯವೋ?
ಏನಿದೇನು ಏನು ಏನು ನಿನ್ನ ಬಣ್ಣದಾ ಚಿತ್ರವೋ ?
ಏನಿದೇನು ಏನು ಏನು ನಿನ್ನ ಮಣ್ಣಿನಾ ಛತ್ರವೋ ?
ಏನಿದೇನು ಏನು ಏನು ನಿನ್ನ ಅಖ೦ಡ ಗಾತ್ರವೋ ?
ಏನಿದೇನು ಏನು ಏನು ನಿನ್ನ ಗಾಳಿಪಟದ ಸೂತ್ರವೋ ?
ಏನಿದೇನು ಏನು ಏನು ನಿನ್ನ ಮತಿಯ ಮ೦ತ್ರವೋ ?
ಏನಿದೇನು ಏನು ಏನು ನಿನ್ನ ಕಪಟ ನಾಟಕವೋ ?