ರಸವತ್ತಾದ ಪ್ರಶ್ನೆಗಳು

ರಸವತ್ತಾದ ಪ್ರಶ್ನೆಗಳು

Comments

ಬರಹ

ರಸವತ್ತಾದ ಪ್ರಶ್ನೆಗಳು

1) gear ಹಾಕುವ ಸೊಪ್ಪಿನಿಂದ ನೀರು ಬೀಳುವ ಜಾಗ ಎಲ್ಲಿದೆ?
2) power ಇದ್ರೂನೂ ಇತ್ತೀಚೆಗೆ ಅಬುಧಾಬಿಯಲ್ಲಿ ಧಬಧಬ ಎಂದು ದಬ್ಬಿಸಿಕೊಂಡವರು ಯಾರು?
3) ಉಪ್ಪಿನ ಸತ್ಯಾಗ್ರಹದಲ್ಲಿ ಕನ್ನಡನಾಡಿನಗಲದ ಕಿವಿಯವರೊಬ್ರು ಅರೆಸ್ಟಾಗಿದ್ರು. ಯಾರವ್ರು?
4) ಭಿಕ್ಷೆಬೇಡ್ಕೊಂಡೇ, ಮೈಕೈ ಬಗ್ಗಿಸ್ಕೊಂಡೇ ಬರೀತಿದ್ದವ್ರು ಯಾರು?
5) ಎಲ್ರಿಗಿಂತ್ಲೂ ಮೊದ್ಲು ಬಿಸಿಬಿಸಿಪತ್ರ ಕಳ್ಸೋ ವ್ಯವಸ್ಥೆ ಮಾಡಿದ್ದು ಯಾರು?
(ಕ್ಲೂ: ಮುಂದೆ ಭಾರಿ ಸೂಕ್ಷ್ಮಬುದ್ಧಿಯವರಿಗೆ ಈ ಪತ್ರಾನ ಮಾರಿಬಿಟ್ರಂತೆ.)
6) ಸರಿಯಾದ ಹುಡುಗನ ಬಗ್ಗೆ ಬರ್ದು ಪ್ರೈಜು ತೊಗೊಂಡೋರು ಯಾರು?
೭) ಹುಲಿಯ ಕೂದಲಿನ ರಾಜನಿಂದ ಸೋತ ನಗುವರಾಜ ಎಲ್ಲಿಯವ?
೮) ನಮ್ಮ ಶ್ರವಣಬೆಳಗೊಳದ ಭಟ್ಟಾರಕರ ಪೈಕಿ ಒಬ್ಬ ಬ್ರಾಹ್ಮಣ ಕ್ರಿಕೆಟ್ ಬಗ್ಗೆ ಮಾತಾಡ್ತಾನಂತೆ. ಯಾರವನು?
೯) ಅಡಿಕೆ ತಿಂದು ಮಾಡೋ ಕೊಲೆಗೆ ಏನು ಹೆಸರು?
೧೦) ವೈಶಾಖದಲ್ಲಿ ಪಂಜಾಬಿಗಳು ಕುಣಿಯೋದಕ್ಕೆ ಏನಂತಾರೆ?

ಸರಿಯಾದ ಉತ್ತರಗಳನ್ನು ತಮಾಶೆಯಾಗುವಂತೆ ಬರೆದರೆ ಖುಷಿಯಾಗುತ್ತದೆ. ಆದರೆ ತಮಾಶೆಯನ್ನೇ ಸರಿಯಂದ್ಕೊಂಡ್ಬಿಟ್ರೆ ಕಷ್ಟ. :)

ಎನಗಿಂತ ಕಿರಿಯರಿಲ್ಲ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet