ರಸ್ತೆ

ರಸ್ತೆ

ಕವನ

                                                            ರಸ್ತೆ

ನಾನು ಜನಗಳ ಸಂಪರ್ಕದ ಕೊಂಡಿ,
ನಾನು ಇಲ್ಲವಾದರೆ ಮಾನವಾದಮಗಳ ನಡುವೆ ಸ್ನೇಹ ಸಂಪರ್ಕ ಕಷ್ಟ,
ನಾನು ಇಲ್ದೆ ವ್ಯಾಪಾರ ವಹಿವಾಟು ಸುಲುಭ ಅಸಾಧ್ಯ,
ನನ್ನ ಮಹತ್ವದ ಬಗೆ ಅಣ್ಣಾವರು 'ಮಾರ್ಗದರ್ಶಿ' ಸಿನಿಮಾ ಮಾಡಿದರು,
ನಾನು ಎಷ್ಟು ಮುಖ್ಯ ಅನ್ನೋ ಅಹಂಕಾರ ನನ್ನಗೆ ಆಯಿತು,

ದಿನಗಳು ಕಳೆದಂತೆ ನನ್ನ ಮೇಲೆ ರಂದ್ರಗಳು ಆದವು,
ನಾನು ಪೂರ್ತಿಯಾಗಿ ಗುಂಡಿಮಯವಾದೆ,
ನನ್ನ ಮೇಲೆ ಚಲಿಸಿದ ವಾಹನ ಸವಾರರು ಹಾಳು ರಸ್ತೆ ಅಂತ ಶಪಿಸಿದರು,
ನನ್ನ ಅವಸ್ಥೆ ಇಂದ ಅಪಗಾಥಗಳು ಜಾಸ್ತಿ ಆದವು,
ಸಾವು ನೋವು ಕಂಡೆನು,
ಅವರೆಲ್ಲರ ಶಾಪ ನನ್ನಗೆ,
ಮತ್ತು ಕೆಲವರು ನನ್ನ ಅವಸ್ತೆ ನೋಡಿ ಅನುಕಂಪ ತೋರಿಸಿದರು,
ನನ್ನ ಅಹಂಕಾರಕ್ಕೆ ತಕ್ಕ ಪಾಠ,

ನನ್ನ ದುರಸ್ಥಿ ಮಾಡೋದಕ್ಕೆ ಸರ್ಕಾರ ಗುತ್ತಿಗೆ ಕರಿಯಿತು ,
ಗುತ್ತಿಗೆ ಕೊಟ್ಟಿದು ಆಯಿತು,
ಗುತ್ತಿಗೆದಾರ ಒಟ್ಟು ೪ ಕೋಟಿಗೆ ಗುತ್ತಿಗೆ ಪಡೆದನು,
ಆತ ನನ್ನ ಮೇಲೆ ವ್ಯಯ ಮಾಡಿದು ೨ ಕೋಟಿ,
ನನ್ನ ಹೆಸರಿನಲ್ಲಿ ೨ ಕೋಟಿ ಪಂಗನಾಮ ಸರಕಾರಕ್ಕೆ ಹಾಕಿದನು,
ಇದನು ಕಂಡು ನನ್ನಗೆ ನಗು ಬಂತು,

ಮತ್ತೆ ನನ್ನು ಮೈತುಂಬಿಕೊಂಡು ರಾರಾಜಿಸಿದೆ,
ನನ್ನ ಮೇಲೆ ಮೆಟ್ರೋ , ದೂರವಾಣಿ , ಕರೆಂಟ್ ಬೋರ್ಡ್ ನವರು ದಾಳಿಮಾಡಿದರು ,
ನಾನು ಮತ್ತೆ ಅವಸಾನದ ಸ್ಥಿತಿ ತಲುಪಿದೆ ,

ಈ ನನ್ನ ಸಮಸ್ಯೆ ಮುಗಿಯಲಾರದ ಕಥೆ .

                                             --------------
                                             ಬರೆದ ಬಡಪಾಯಿ ,
                                                                     ಹರೀಶ್ ಎಸ್ ಕೆ