ರಹದಾರಿ...?
ಕವನ
ಇರ್ಷೆ ದ್ವೇಷ ಗಳಿಲ್ಲದ
ಕತ್ತಿ ತಲ್ವಾರುಗಳ ಸದ್ದಿಲ್ಲದ
ಜಾತಿ ಮತಬೇಧಗಳಿಲ್ಲದ
ಪ್ರಜಾ ಸ್ನೇಹಿ ರಾಜಕುಮಾರನೂರಿಗೆ
ಕರೆದೊಯ್ಯವುದೇ ಈ ರಹದಾರಿ..?
ನಿರ್ಮಲವಾದ ಚಿಗುರೊ ಮನಸ್ಸುಗಳಲ್ಲಿ
ಕುಲಮತಗಳ ಬೀಜ ಬಿತ್ತದೆ,
ಸರ್ವ ಧರ್ಮಗಳೂ ಒಂದೇ ಎನುತಾ
ಸಮಾನತೆಯ ಸಾಮರಸ್ಯ ಸಾರುವ
ಸೌಹಾರ್ದದೂರಿಗೆ ತಲುಪುವುದೇ ಈ ರಹದಾರಿ...?
ಮದ್ದು ಗುಂಡುಗಳ ಬದಲಾಗಿ ವೇದ ಮಂತ್ರಗಳ ದನಿ ಕೇಳುವ
ಯುದ್ದವಿರದ ಕದ್ದು ತಿನ್ನದ ನರರು ಸುರರಾಗಿ,
ಅರಮನೆ ತೊರೆದ ಬುದ್ದನು ನಡೆದಾಡಿದ
ಶಾಂತಿ ಧಾಮಕೆ ಕರೆದೊಯ್ಯಬಲ್ಲುದೇ ..ಈ
ರಹದಾರೀ..?
ಧರೆಯ ಮೇಲಿನ ಧಗೆಗಿಂತ ಮನದೊಳಗಿನ ಕ್ರೌರ್ಯ ಲೋಕವ ವಿನಾಶದತ್ತ ಕೊಂಡೊಯ್ಯುತಿದೆ
ಬಲ್ಲವರು ಹೇಳಿರಿ ಈ ಕಲಿಯುಗದ ಕಲಿರಾಜ್ಯವು ಸಾಕಾಗಿದೆ ಎನಗೆ, ಈ ರಹದಾರಿ ಮನುಷ್ಯತ್ವದ ಊರಿಗೆ ಕರೆದೊಯ್ಯುವುದೇ..?
ನಾನು ಪಯಣಿಸ ಬೇಕಿದೆ ಅಂತಹ ಊರಿಗೆ..!!
-ಈರಪ್ಪ ಬಿಜಲಿ, ಕೊಪ್ಪಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್