ರಾಜಕಾರಣಿ

ರಾಜಕಾರಣಿ

ಬರಹ

ಓ ಇಂದಿನ ರಾಜಕಾರಣಿ,
ಆಗು ನೀ ಜಗಕೆ ಚಿಮಣಿ.
ನೀಡುತಿರು ಬೆಳಕ ಚಿಕ್ಕ ದೀಪವಾಗಿ,
ಸುಡದಿರು ಜಗವ ಬೆಂಕಿಯಾಗಿ. ||ಪ||

ಮರೆಯದಿರು ಸವೆಸಿ ಬಂದ ಹಾದಿಯನು,
ಮುಂದೆ ಹೋದಾಗ..
ಮರೆತರೆ ಯಾರೂ ಬರಲಾರರು
ನೀ ಸತ್ತಾಗ! || ೧ ||

ಕೈಲಾದಷ್ಟು ಮಾಡು
ಚುನಾಯಿಸಿದ ಜನಕೆ ಒಳ್ಳೇಯದ.
ಆಗ ಸುಮ್ಮನೆ ನೋಡು
ನಿನ್ನ ಜಗವೇ ಮೆಚ್ಚುವುದ. || ೨ ||

ಬಲಿಯಾಗಬೇಡ ಎಂದೂ ನೀ, ಭ್ರಷ್ಟಾಚಾರಕ್ಕೆ
ಋಣಿಯಾಗಿರು ಜನರ ಅಭಿಮಾನಕ್ಕೆ.
ಕೊಡಬೇಡ ಕುಮ್ಮಕ್ಕು ಸ್ವಜನ ಪಕ್ಷ-ಪಾತಕ್ಕೆ.
ನೀನಾಗ ನಾಯಕ, ಜನ ಮನದ ಶಿಖರಕ್ಕೆ. || ೩ ||