ರಾಜಕೀಯ ಚು(ಕು)ಟುಕುಗಳು ಬಾಗ-೨
ಬಕ್ರ
-----
ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು
ಅನಂತ್‍ನಾಗ್ ರ ಯಶಸ್ವಿ ಚಲನಚಿತ್ರ
ಮೈತ್ರಿ ಸರ್ಕಾರಕ್ಕೆ ಹನ್ನೆರಡು ಷರತ್ತುಗಳು
ಒಪ್ಕೊಂಡ್ರೆ ಬಿ.ಜೆ.ಪಿ ಗ್ಯಾರಂಟಿ ಆಗುತ್ತೆ ಬಕ್ರ !
ಹೀನಾಯ
------
ಬದಲಾಯಿಸಿದರೂ ತಮ್ಮ ನಾಮಧೇಯ
ಇನ್ನೂ ಈಡೇರಲೇ ಇಲ್ಲ ಮೂಲಧ್ಯೇಯ
ಮರುಮೈತ್ರಿ ಆಗದಿದ್ರೆ ಸ್ಥಿತಿ ಹೀನಾಯ !
ಮರು ಮಧುವೆ
------------
ಜೆ.ಡಿ.ಎಸ್ , ಬಿ.ಜೆ.ಪಿ ಗೆ ಮತ್ತೆ ಮಧುವೆ
ಆ...ಹಾ...ಹಾ...
ಗಂಡ ಬಿಟ್ಟ ಹೆಂಡತಿಯ ಗಂಡನಿಗೆ
ಗಂಡ ಬಿಟ್ಟ ಹೆಂಡತಿಯೊಡನೆ ಮರು ಮಧುವೆ !
ಡೊಳ್ಳುಕೂಟ
---------
ಗುರೂ ಏನಿದು ರಾಜಕೀಯ ದೊಂಬರಾಟ
ಆಡಿದ್ರೂ ಒಬ್ಬರ ಮೇಲೊಬ್ಬರು ಕೆಸರೆರೆಚಾಟ
ಶುರು ಮಾಡ್ತಾವ್ರೆ ಮತ್ತದೆ ಡೊಳ್ಳುಕೂಟ
ಹೊಡೆತ
------
ರಾಜಕಾರಣಿಗಳಿಗಿಲ್ಲ ಮಾತಿನ ಮೇಲೆ ಹಿಡಿತ
ರಾಜಕಾರಣಿಗಳಿಗಿಲ್ಲ ಮಾತಿನ ಮೇಲೆ ಹಿಡಿತ
ಕೇಳಿದ ಬುದ್ದಿಜೀವಿಗಳಿಗೆ ಪಾಪ ಮಾತಿನ ಹೊಡೆತ !
ಹೂಸರವಳ್ಳಿ
-----------
ನಾ ಹುಟ್ಟಿ ಬೆಳೆದದ್ದು ಒಂದು ಪುಟ್ಟ ಹಳ್ಳಿ
ಆದರೂ ಕಂಡಿರಲಿಲ್ಲ ಎಂದೂ ಹೂಸರವಳ್ಳಿ
ಕಂಡು ಬೆರಗಾದೆ ಅವ ರಾಜಕಾರಣಿಗಳಲ್ಲಿ !
ಸ್ನೇಹಿತರೆ,
ನಮ್ಮ ರಾಜಕಾರಣಿಗಳ ದೊಂಬರಾಟಕ್ಕೆ ನಾವೇನು ಮಾಡಲು ಸಾದ್ಯ ಎಂದು ಸುಮ್ಮನಿರಬೇಡಿ. ನಾವು ನಮ್ಮ ಮತವನ್ನು ಸರಿಯಾದ ಅಭ್ಯರ್ತಿಗೆ ಹಾಕುವುದರ ಮೂಲಕ ಇದನ್ನು ಸ್ವಲ್ಪ ಮಟ್ಟಿಗಾದರು ಸುಧಾರಿಸಬಹುದು. ಎಲ್ಲ ಅಭ್ಯರ್ತಿಗಳು ಬ್ರಷ್ಠರಾಗಿರುವಾಗ ಯಾರಿಗೆ ಮತ ಹಾಕಿ ಏನು ಪ್ರಯೊಜನ ಎಂದು ಇತ್ತೀಚೆಗೆ ವಿದ್ಯಾವಂತರು ಅನೇಕರು ಮತ ಹಾಕುವುದನ್ನು ಬಿಟ್ಟಿದ್ದಾರೆ. ಇದರಿಂದ ಬರೀ ಅವಿದ್ಯಾವಂತ, ತಿಳುವಳಿಕೆ ಇಲ್ಲದ ಜನಗಳನ್ನು ಹಣದ ಬಲೆ ಬೀಸಿ ಮರುಳುಮಾಡಿ ಮತಗಳಿಸುತ್ತಾರೆ. ನಾವು ಕಂಡಂತೆ ಕೇವಲ ಶೇಖಡ ೫೫ ರಿಂದ ೬೦ ಪ್ರತಿಶತ ಮತದಾನ ಮಾತ್ರ ಆಗುತ್ತದೆ, ಇನ್ನುಳಿದ ೪೦ ಪ್ರತಿಶತ ಮತಗಳು ಪ್ರಜ್ಞಾವಂತ ಮತದಾರರದ್ದಾಗಿರುತ್ತವೆ ಎಂಬುದು ನನ್ನ ಅಬಿಪ್ರಾಯ. ತಿಳುವಳಿಕೆ ಇರುವವರೆಲ್ಲ ಅರ್ಹ ಅಭ್ಯರ್ತಿಗೆ ಮತ ಹಾಕಿಸುವಲ್ಲಿ ಇತರರಿಗೆ ಅರಿವು ಮೂಡಿಸಿ.., ತಾವು ಮತ ಮಾಡಿದರೆ ಸ್ವಲ್ಪಮಟ್ಟಿಗೆ ಸುಧಾರಿಸಬಹುದು ಎಂದು ನನ್ನ ಅನಿಸಿಕೆ.