ರಾಜಕೀಯ ಮಹತ್ವಾಕಾಂಕ್ಷಿಗಳು ಭ್ರಷ್ಟಾಚಾರ ನಿರೋಧಿಗಳಾಗಲಾರರು

ರಾಜಕೀಯ ಮಹತ್ವಾಕಾಂಕ್ಷಿಗಳು ಭ್ರಷ್ಟಾಚಾರ ನಿರೋಧಿಗಳಾಗಲಾರರು

ಬರಹ

 ಯಡಿಯೂರಪ್ಪನವರೋ, ಮನಮೋಹನರ ಹಿಂಬಲಕರ ಪೈಕಿಯೋ ಯಾರಾದರೂ ಜೈಲಿಗೆ ಹೋದರೆಂದರೆ (ನರುತ್ತಿರುವ ನಮ್ಮ ವ್ಯವಸ್ಥೆಯಲ್ಲಿ ಅದೂ ಸಾಧ್ಯವೇ?!) ದೇಶದ ಭ್ರಷ್ಟಾಚಾರ ಹಿಂಗಿದಂತಾಗುವುದಿಲ್ಲ. ಅಂತೆಯೇ ಮನಮೋಹನರ ಸವಾಲಿನಂತೆ ಅವರ ರಾಜಕೀಯ ಜೀವನ, ಸ್ವಚ್ಛ ಬಿಳಿಹಾಳೆಯ ಪುಸ್ತಕವಾದರೂ, ನಮಗೆ, ಅಪ್ಪಾವಿ ಮಹಾಜನತೆಗೆ ಲಾಭವೇನೂ ಇಲ್ಲ, ಅದೆಲ್ಲಾ ಅವರವರ ವೈಯಕ್ತಿಕ ಕರ್ಮ-ಕರ್ಮಾಂತರವಷ್ಟೇ! ದಶಕೋಟಿ-ಶತಕೋಟಿಗಳನ್ನು ನುಂಗಿದವರನ್ನು ಮಾತ್ರ ಹಾದರಿಗಳೆಂದು ಬಿಂಬಿಸುವ ಮಾಧ್ಯಮಗಳ ಉನ್ಮಾದದಲ್ಲಿ ನಾವೂ ಮೂರ್ಖರಾಗಿಬಿಡುತ್ತೇವೆ. ಆದರೆ ನಿಜವಾಗಿ ನಾವು ದರಿದ್ರರೂ, ವಂಚಿತರೂ ಆಗುವುದು, ಆ ಶತಕೋಟಿ-ಸಹಸ್ರಕೋಟಿಗಳು ಜನರೇಟ್ ಆಗುವ ಪ್ರಕ್ರಿಯೆಯಲ್ಲಿ! ಇದು ಸರಕಾರೀ ಜವಾನಿಕೆ, ಗುಮಾಸ್ತಿಕೆಯಲ್ಲಿನ ಲಂಚದ ಪುಡಿಗಾಸಲ್ಲ; ನಮಗೆ ಕೆಲಸ ಮಾಡಿಸಿಕೊಡುವ ಬ್ರೊಕರ್‌ಗಳು, ಸರಕಾರೀ ಕೆಲಸದ ಬಿಲ್ ಪಾವತಿ ಮಾಡಿಸಿಕೊಳ್ಳುವ ಕಾಂಟ್ರಾಕ್ಟರುಗಳು, ರಾಜಕೀಯ ಏಜಂಟರುಗಳೂ ಆಗುವ ಪುಡಿ ರೌಡಿ-ಗೂಂಡಾಗಳು ಇಂತಹ ಭ್ರಷ್ಟ ಸಂಪತ್ತಿಗೆ ಮೂಲವಗುತ್ತಾರೆ.
 ಇವರಿಗಾವ ಲೊಕಪಾಲ? ಲೋಕಾಯು?! ಈ ನೊಣ-ಸೊಳ್ಳೆಗಳು ಹುಟ್ಟಿ ಬೆಲವಯುವುದು, ಚುನವಣಾ ವ್ಯವಸ್ಥೆಯೆಂಬ ರಾಡಿ ಗುಂಡಿಯಲ್ಲಿ. ಇದನ್ನು ಜೆಪಿಯವರ ಸಂಪೂರ್ಣ ಕ್ರಾಂತಿಯೂ ಅರ್ಥಮಾಡಿಕೊಳ್ಳಲಿಲ್ಲ; ಅಣ್ಣಾ ಹಜಾರೆ ಗುಡುಗಿನಲ್ಲೂ ಇದರ ಸೊಲ್ಲಿಲ್ಲ. ಬದಲಿಗೆ ಆಗಿನ ಕ್ರಾಂತಿಯ ರಾಜಕೀಯದ ಒಡಕು ದನಿಯೇ ಈಗಲೂ ಕೇಳಿಬರುತ್ತಿದೆ. ಕ್ರಾಂತಿಪುರುಷನೆಂಬುವವನು ಪ್ರಾಮಾಣಿಕನಾಗಿದ್ದರೆ ಸಾಲದು; ಜತೆಗೆ ರಾಜಕೀಯ ವಿವೇಕ ಹೊಂದುರುವುದೂ ಅಗತ್ಯವಾಗುತ್ತದೆ.
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet