ರಾಜಕೀಯ
ಬರಹ
ನಾ ಕಂಡೆ ಒಂದು ರಾಜಕೀಯದ ಕನಸು
ನನಗಾಗಿತ್ತು ಆಗ ಎಂಬತ್ತರಾ ವಯಸ್ಸು,
ಕಾಣಲು ಇಂಥಹ ಕನಸು,ಮರೆತನು ಮುದಿವಯಸು|
ಮುಂದುವರಿಯಿತು ನನ್ನ ಕನಸು--
ನಾನಾದೆ ಮುಖ್ಯಮಂತ್ರಿ-ಸಿಕ್ಕಿತು ಪದವಿ,
’ನೀವೇ ರಾಜ್ಯವನ್ನಾಳಿ,ನೀವೇ
ರಾಜ್ಯವನ್ನಾಳಿ’ಎಂದು ಎಲ್ಲರ ಮನವಿ|
ಉತ್ತಮ ರಾಜ್ಯ ನಿರ್ಮಣ-ನನ್ನ ಕನಸಿನೊಳಗಿನ ಕನಸು,
ತೋರಿದೆ ಪ್ರಾಮಾಣಿಕತೆ-ಸಹಚರಿಗಳಿಗೆ ನನ್ನಮೇಲೆ ಮುನಿಸು|
"ರಾಜ್ಯ ನಮ್ಮದು-ಜನರು ನಮ್ಮವರು,
ಜನರ ಸಂಪತ್ತು ನಮ್ಮ ಸಂಪತ್ತು,
ಇವರ ಸಂಪತ್ತನ್ನು ತಮ್ಮಲ್ಲಿ ಇಟ್ಟಿಕೊಂಡು
ಸ್ವಂತಕ್ಕೆ ಮಜಾಮಾಡು ಎಲ್ಲಾ ಬಚ್ಚಿಕೊಂಡು"
ಎಂಬ ರಾಜಕೀಯ ನೀತಿ ಕಲಿತೆ ರಾಜಕೀಯ ಗುರುಗಳಿಂದ,
ಮರೆತೆ ಜನರಪ್ರೀತಿ,ಪ್ರಾಮಣಿಕತೆ ನನ್ನ ಹೃದಯದಿಂದ|
ತಟ್ಟನೆ ಎದ್ದೆ ನಿದ್ದೆಯಿಂದ, ನಿಜವೆನಿಸಿತು
"ಬದಲಾಗದು ರಾಜಕೀಯ-ಬದಲಿಸಿಕೊ ನಿನ್ನ ಕನಸನು"||