ರಾಜೇಶ್ vs ರಾಜ್
ನಾನು ಹಳೆಯ ಚಿತ್ರಗಳನ್ನು ಹೆಚ್ಚಾಗಿ ನೋಡಿಲ್ಲ. ಡಾ.ರಾಜ್ ಚಿತ್ರಗಳನ್ನು ಸಹ ಹೆಚ್ಚಾಗಿ ನೋಡಿದ್ದು, ಮೆಚ್ಚಿದ್ದು ಅಮೇರಿಕೆಗೆ ಬಂದ ನಂತರ! ಆದರೆ, ಟೀವಿಯಲ್ಲಿ ಬಿತ್ತರಿಸಿದ ಕೆಲವು ಹಳೆಯ ಚಿತ್ರಗಳಲ್ಲಿ ನೋಡಿರುವುದು ಡಾ.ರಾಜ್ ಮತ್ತು ಕಲ್ಯಾಣ್ಕುಮಾರ್, ರಾಜೇಶ್, ಗಂಗಾಧರ್(?) ಇವರುಗಳು ಸಮಕಾಲೀನರೆಂದು. ಕಲ್ಯಾಣ್ಕುಮಾರ್ ಮತ್ತು ಗಂಗಾಧರರು ರಾಜ್ ರಿಗೆ ಯಾವ ರೀತಿಯಲ್ಲೂ ಸಾಟಿಯಿರಲಿಲ್ಲ. ಆದರೆ, ರಾಜೇಶ್ ರಿಗೆ ಹೀರೋಗಿರಬೇಕಾದ ಗತ್ತು, ಮುಖಚರ್ಯೆ, ಎತ್ತರ, ನಟನಾ ಸಾಮರ್ಥ್ಯ ಎಲ್ಲ ಇತ್ತು. ಆದರೂ, ರಾಜ್ ಗೆದ್ದರು, ಮಿಂಚಿದರು, ರಾಜೇಶ್ ಒಂದು ಮಟ್ಟದಲ್ಲೇ ಉಳಿದರು. ಯಾಕೆ ಹೀಗಾಯ್ತು?
ಬರಿಯ ನಟನೆಯಿಂದ ರಾಜ್ ಎಲ್ಲರನ್ನೂ ಹಿಂದೆ ಹಾಕಿದರೆ? ಅಥವ ಅವರ ನಟನೆಗೆ ಪುಷ್ಠಿಕೊಡುವಂತಹ ಪಾತ್ರಗಳು, ಕಥಾವಸ್ತು ಅವರಿಗೆ ದಕ್ಕಿದವೆ? ಹಾಗಾದರೆ, ರಾಜೇಶ್ ಅವಕಾಶವಂಚಿತರಾದರೆ? ರಾಜೇಶ್ ಮತ್ತು ರಾಜ್ ಚಿತ್ರಗಳನ್ನು ಮಸ್ತಾಗಿ ನೋಡಿರುವ ಯಾರಾದರೂ ಹೇಳಿದರೆ ಚೆನ್ನಾಗಿರುತ್ತೆ. (ಬರಿಯ ಡಾ.ರಾಜ್ ಬೀಸಣಿಗೆಗಳು ಇಲ್ಲಿ ಬಂದು ಬೀಸಬೇಡಿ :-))
Comments
ಉ: ರಾಜೇಶ್ vs ರಾಜ್
ಉ: ರಾಜೇಶ್ vs ರಾಜ್
ಉ: ರಾಜೇಶ್ vs ರಾಜ್
ಉ: ರಾಜೇಶ್ vs ರಾಜ್