ರಾಜ್ಯೋತ್ಸವಕ್ಕೆ 'ಸಂಪದ'ದ ಇ-ಪುಸ್ತಕ

ರಾಜ್ಯೋತ್ಸವಕ್ಕೆ 'ಸಂಪದ'ದ ಇ-ಪುಸ್ತಕ

ಬರಹ

ನವೆಂಬರ್ ೧ ಹತ್ತಿರ ಬರುತ್ತಿದೆ.

ಈ ವರುಷ ಸಂಪದದಲ್ಲಿ ಮಾಡಬೇಕು ಎಂದು ನಾವಂದುಕೊಂಡ ಸಾಕಷ್ಟು ಕೆಲಸಗಳು ನೆರವೇರಲಿಲ್ಲ. ಆದರೂ ಸಂಪವನ್ನೋದುವವರು ದಿನೇ ದಿನೇ ಕಡಿಮೆಯಾಗದೇ ಹೆಚ್ಚುತ್ತಿರುವುದು ಸಂತಸದ ಮತ್ತು ಹೆಮ್ಮೆಯ ವಿಷಯ. ಬರುವ ದಿನಗಳಲ್ಲಿ ಸಂಪದದಲ್ಲಿ ಆಗಬೇಕೆಂದುಕೊಂಡ ಹಲವು ಕೆಲಸಗಳನ್ನು ನಾವೆಲ್ಲರೂ ಕೈಗೆತ್ತಿಕೊಂಡು ಮುಂದುಹೋಗುವುದರ ಪ್ರಾರಂಭವೆಂಬಂತೆ ಈ ಸಲದ ರಾಜ್ಯೋತ್ಸವಕ್ಕೆ 'ಸಂಪದ'ದಲ್ಲಿ ಇಲ್ಲಿಯವರೆಗೂ ಸೇರಿಸಲ್ಪಟ್ಟಿರುವ ಉತ್ತಮ ಲೇಖನಗಳ ಒಂದು ಇ-ಪುಸ್ತಕ ಮಾಡಿ ನವೆಂಬರ್ ಒಂದರಂದು ಹಂಚೋಣ ಎಂಬ ಸಲಹೆಗಳು ಮೂಡಿಬಂದವು.

ಸಲಹೆ ಉತ್ತಮವಾದುದೆಂದು ತಿಳಿದು ಎಲ್ಲ ಸದಸ್ಯರಿಗೂ ಈ ಇ-ಪುಸ್ತಕ ಜೋಡಣೆಯಲ್ಲಿ ಭಾಗವಹಿಸಬೇಕೆಂದು ಕೇಳಿಕೊಳ್ಳಲು ಇದನ್ನು ಬರೆಯುತ್ತಿರುವೆ. ನೀವು ಇದುವರೆಗೂ ಸಂಪದದಲ್ಲಿ ಓದಿದ, ಮೆಚ್ಚಿದ ಲೇಖನಗಳ URLಗಳನ್ನು ನಮಗೆ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಿ:

webmaster AT sampada DOT net

ಓದುಗರಿಂದ ಹೆಚ್ಚು ಸೂಚಿಸಲ್ಪಟ್ಟ ಲೇಖನಗಳನ್ನು ಸಂಪದ ಬಳಗದ ಹಿರಿಯ ಲೇಖಕರ ಸಂಪಾದಕತ್ವದಲ್ಲಿ ಇ-ಪುಸ್ತಕಕ್ಕೆ ಸೇರಿಸಲಾಗುವುದು.

* ನಿಮ್ಮ ಮೆಚ್ಚಿನ ಪುಟಗಳನ್ನು ಕಳುಹಿಸಲು ಕೊನೆಯ ದಿನಾಂಕ ಅಕ್ಟೋಬರ್ ೨೮ರ ಶನಿವಾರ.
* ಸದಸ್ಯರು ಎಷ್ಟು ಬೇಕಾದರೂ ಲೇಖನಗಳನ್ನು ಸೂಚಿಸಬಹುದು.
* ಸದಸ್ಯರು ತಾವೇ ಬರೆದ ಲೇಖನಗಳನ್ನು ಸೂಚಿಸಕೂಡದು.