ರಾತ್ರಿ ಮತ್ತು ನಾನು

4

ಹೊತ್ತು ಮುಳುಗಿ ಕತ್ತಲಾಗುತ್ತಿಂದತೆಯೇ
ಹೊತ್ತಿಕೊಳ್ಳುತ್ತವೆ ನನ್ನಲ್ಲಿ ವಿರಹದ ಹಾಡುಗಳು.
ರಾತ್ರಿಯೆಲ್ಲ ಮನವೆಂಬುದು ಸೂತಕದ ಮನೆಯಾಗಿ
ಕಾಯುತ್ತಿರುತ್ತದೆ ಎಂದೂ ಸಾಯದ ಸಾವಿಗಾಗಿ.

ಎಂದೋ ಸಾಯಬೇಕಿದ್ದ ವಿರಹ ಇಂದೂ ಬದುಕಿದೆ
ಬಹು ಹಿಂದೆ ನೀಡಿದ ಹನಿ ಪ್ರೇಮದ ಸಂಜಿವಿನಿಯಿಂದಾಗಿ.
ಈ ಕಗ್ಗದ ಸುಗ್ಗಿಯಲಿ ಕೈಗೆಟುಕದ ಫಸಲು ರಾಶಿ-ರಾಶಿ
ಒಂದೆ ರಾತ್ರಿಯಲಿ ಬಿತ್ತಿ, ಬೆಳೆದು, ಉಂಡು
ಉಳಿದಿದ್ದಲ್ಲವನೂ ನಾಳೆಗಾಗಿರಿಸಿದ್ದೇವೆಂಬುದು ಬರಿ ನೂವು.

ಕಸುವು ಬೇಕಿಲ್ಲ, ಬೇಸಾಯಬೇಕಿಲ್ಲ, ಕಸ ಕೀಳಬೇಕಿಲ್ಲ
ನೀರುಣಿಸಿ, ಹಕ್ಕಿಕಾಯ್ದು, ಕೊಯ್ಲು ಮಾಡಬೇಕಿಲ್ಲ,
ಅವಳು ಬರಿ ಬಿತ್ತಿದರೆ ಸಾಕು ಎತ್ತೆತ್ತಲೂ ವಿರಹದ ತೆನೆ.

ಒಂದು ರಾತ್ರಿ, ಒಂದು ಪದ್ಯ ಸ್ವಲ್ಪ ಮಧ್ಯ
ಯಾಕೆ ಕಾಯಬೇಕಿದೆ ಶಿವರಾತ್ರಿಗಾಗಿ?
ಒಂದು ದಿನ ಅವಳು ಕೊಟ್ಟ ಪ್ರೇಮವೇ ಕೊನೆ
ಮಿಕ್ಕಿದ್ದೆಲ್ಲವೂ ಬರೀ ಶಿವರಾತ್ರಿಗಳು.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಹೇಶ್ವರ ಮಠದರೆ ವಂದನೆಗಳು ಬಹಳ ಭಾವಪೂರ್ಣ ಮತ್ತು ಅರ್ಥಗರ್ಭಿತವಾಗಿ ಬರೆದಿದ್ದೀರಿ, ವಿರಹ ಕಾಡುವುದೆ ಹಾಗೆಅದು ಎಂದೂ ಸಾಯುವುದಿಲ್ಲ ವಿರಹಿಯನ್ನು ದಳ್ಳುರಿಯಲ್ಲಿ ಬೇಯಿಸುತ್ತ ಹೋಗುತ್ತದೆ, ವಿರಹಿ ಅಮರನಲ್ಲ ಆದರೆ ವಿರಹ ಅಜರಾಮರ. ವಿರಹ ಇಂದು ನಿನ್ನೆಯದಲ್ಲ ಅದು ಕಾಲಾತೀತ, ಅದರ ಇರುವಿಕೆಯೆ ಬಾಳಿನ ಒಂದು ಸುಂದರ ಅನುಭೂತಿ. ಉತ್ತಮ ಚಿಂತನೆಗೆ ಹಚ್ಚುವ ಕವನ ನೀಡಿದ್ದಕ್ಕೆ ಧನ್ಯವಾದಗಳು.

ಪಾಟೀಲರೇ, ವಿರಹದಲ್ಲಿ ಒಂದು ರೀತಿಯ ಹದನಾದ ಸುಖವಿರುತ್ತದೆ. ತುಂಬ ಹಿಂದಿನ ಗಾಯ ಮಾಯುವ ಮುನ್ನ ಕೆರೆದಷ್ಟೂ ಹಿತ ಕೊಡುವಂತೇ, ವಿರಹಕೂಡ ಒಂದು ರೀತಿಯ ಹಿತ. ಆದರೆ ಇದು ನಿರಾಶಾವಾದ ಅಥವಾ ನಿಸ್ಸಹಾಯಕತೆಯಲ್ಲ.