ರಾಧೇಕೃಷ್ಣ

ರಾಧೇಕೃಷ್ಣ

ಕವನ

ಮಾಧವ ಯಮುನಾ ತೀರದಲಿ 
ಮೋದದಿ ಕುಳಿತಿಹ ಪ್ರೇಮದಲಿ  
ರಾಧೆಯ ರಮಿಸುತ ಸನಿಹದಲಿ   
ಹೃದಯವು ಮಧುರ ಭಾವದಲಿ 

ಜಲದೊಳು ಹಂಸವು ಆಡುತಲಿ 
ಕಲರವ ಗಾನವು ನೀರಿನಲೆಯಲಿ 
ಅಲೆಗಳು ಸ್ಪರ್ಶಿಸಿ ಸಾಗುತಲಿ
ನಲಿವಿದೆ ಜುಳುಜುಳು ನಾದದಲಿ 

ಕೊಳಲಿನ ಗಾನದ ಸುಧೆಯ ಸವಿಯು 
ಫಳಫಳಿಸುವ ಹೊಂಬೆಳಕಿನ ಸಿರಿಯು
ನಳನಳಿಸುವ ಶ್ವೇತಾಂಬರಿ ರಾಧೆಯು
ಪುಳಕಿತಗೊಂಡಳು ಕೃಷ್ಣನ ರಮಣಿಯು 

ಪ್ರೇಮದ ಸ್ಫೂರ್ತಿಯ ಸಂಕೇತವು
ಪ್ರೇಮಿಗಳಾಗಿ ರಾಧೇಕೃಷ್ಣ ಮಿಲನವು 
ಗಾದಿಗೂ ದೊಡ್ಡದು ಪ್ರೀತಿಯ ಬಲವು
ನೇಮದಿ ನಿಂತಿದೆ ಜಗದೊಲವು 
-ಕಾ ವಿ ರಮೇಶ್ ಕುಮಾರ್