ರಾಮನಿಗೆ ಶಬರಿಯ ಕಾಣ್ವ ತವಕ

ರಾಮನಿಗೆ ಶಬರಿಯ ಕಾಣ್ವ ತವಕ

ಕವನ

ಎಂದು ಕಾಂಬೆನೋ!
ಲಕ್ಷ್ಮಣಾ
ಆ ಮಾತೃ ಹೃದಯಿಯಾ!
ಎಂದು ಕಾಂಬೆನೋ!।।

ಅವಳ ಹೆಸರು ಶಬರಿಯಂತೆ
ಮಾತಂಗ ಮುನಿಯ ಶಿಷ್ಯಳಂತೆ
ಈ ರಾಮನ ಕಾಣ್ವ ತವಕವಂತೆ ।।

ಆಶ್ರಮದಿ ಅವಳು ತಾಪಸಿಯಂತೆ
ಮಮತೆಯಲಿ ಅವಳು ತಾಯಿಯಂತೆ
ರಾಮನಾಮವೇ ಅವಳ ಉಸಿರಂತೆ ।।

ಹಲವು ಬಗೆಯ ಹೂಗಳ ಕೊಯ್ವಳಂತೆ
ಕಚ್ಚಿ ರುಚಿ ರುಚಿ ಹಣ್ಣುಗಳ ಇಟ್ಟಿಹಳಂತೆ
ಈ ರಾಮನ ದಾರಿಯನೇ ನೋಡ್ವಳಂತೆ ।।

ಈ ರಾಮನ ನೋಡಲು ಕಾತುರವಂತೆ
ಈ ರಾಮನ ಪೂಜಿಸಲು ಕಾದಿಹಳಂತೆ
ಹನುಮನ ಕಡೆ ದಾರಿ ತೋರ್ವಳಂತೆ ।।