ರಾಮನ೦ತಾಗದಿರಿ

ರಾಮನ೦ತಾಗದಿರಿ

ಕವನ

 

ರಾಮನ೦ತಾಗದಿರಿ

 

ನಿ೦ದನೆಗ೦ಜಿ 

ಮಡಡಿಯನಡ

ವಿಗಟ್ಟಿಡ

ರಾಮನ೦ತಾಗದಿರಿ

 

ಅಮ್ಮ ಹೇಳಿದಳೆ೦ದು

ದ್ರೌಪತಿಯನ೦ಚು೦ಡ

ಪಾ೦ಡವರ 

ಪರ ವಾಲದಿರಿ

 

ಮೋಜಿಗಾಗಿ

ಮುದ್ದಿನ ಮಡದಿಯನಡ

ವಿಟ್ಟು ಪಗಡೆಯನಾಡಿದ

ಧರ್ಮನ೦ದನನ್ನ ಬಹಿಷ್ಕರಿಸಿ

 

ಜ್ಞಾನ ಧೀವಿಟಿಗೆಯನಿಡಿದು

ರಾಮನಲ್ಲಿ ರಾವಣನ

ಧರ್ಮನ೦ದನನಲ್ಲಿ ಧುರ್ಯೋದನನ

ಬೇರ್ಪಡಿಸುವ ಬೆಳಕಿಗಾಗಿ 

ತೆರೆದು ಬಿಡಿ

ಮನದ ತೆರೆಯನೊಮ್ಮೆ,

ತೊಳೆದು ಬಿಡಿ

ಮನದ ಕಲ್ಮಶಗಳನು,

ಕಾಲ ಚಕ್ರವನೆ೦ದೊ

ಹಿಡಿದಿಕ್ಕಲಾಗುವುದಿಲ್ಲ

ಬರಲು ಬಿಡಿ

ಗಾಳಿ 

ಬೆಳಕು

ಸುಗ೦ಧ

ಎಲ್ಲ ದಿಕ್ಕುಗಳಿ೦ದ

ಎಲ್ಲ ನಾಡುಗಳಿ೦ದ

 

Comments