ರಾಮನ ನೊಸಲಿಗೆ ಸೂರ್ಯನ ತಿಲಕ

ರಾಮನ ನೊಸಲಿಗೆ ಸೂರ್ಯನ ತಿಲಕ

ಕವನ

ಚೈತ್ರದ ಶುಕ್ಲದ ನವಮಿಯ ದಿನದಲಿ

ಬುವಿಯಲಿ ರಾಮನ ಅವತಾರ

ದುಷ್ಟರ ಶಿಕ್ಷಿಸಿ ಶಿಷ್ಟರ ಪೊರೆಯಲು

ಮಾಡಿದ ದನುಜರ ಸಂಹಾರ

 

ರಾಮನ ನೊಸಲಿಗೆ ಚಂದದ ತಿಲಕವ

ಇರಿಸಿದೆ ಸೂರ್ಯನ ಹೊಂಗಿರಣ

ಎಂತಹ ಸುಂದರ ಕ್ಷಣವಿದು ಎನಿಸಿದೆ

ಧನ್ಯತೆ ಪಡೆಯಿತು ಈ ನಯನ

 

ಪೃಥ್ವಿಯ ಒಡೆಯನ ಸುಂದರ ನಗುಮೊಗ 

ಜಾನಕಿ ರಮಣನ ಸೌಂದರ್ಯ

ಭಕ್ತರ ರಸನದಿ ರಾಮನ ನಾಮವು

ಕೇಳಲು ಎಂತಹ ಮಾಧುರ್ಯ

 

ಹೃದಯದ ಗುಡಿಯಲಿ ಭಕ್ತಿಯ ಪೂಜೆಯ

ನಡೆಸುತಲಿರುವನು ಹನುಮಂತ

ಮಾತೆಯನರಸಲು ಶರಧಿಯ ದಾಟಿದ

ಸಾಟಿಯು ಇಲ್ಲದ ಧೀಮಂತ||

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್