ರಾಮಾ ನಿನಗೆ ಕಷ್ಟವೇತಕಯ್ಯ ರಾಮ ನಿನಗೆ ಕಷ್ಟವೇತಕಯ್ಯ
ರಾಮಾ ನಿನಗೆ ಕಷ್ಟವೇತಕಯ್ಯ ರಾಮ ನಿನಗೆ ಕಷ್ಟವೇತಕಯ್ಯ
ಮಂಥರೆಯ ಕೆಂಗಣ್ಣಿಗೆ ಗುರಿಯಾಗಿ ಅಡವಿ ಪಾಲಾದೆಯ ರಾಮ..
ನವವಧು ಸೀತಾಮಾತೆ, ಲಕ್ಷ್ಮಣರೊಂದಿಗೆ ಹೊರಟೆ ಅಡವಿಗೆ
ಕಲ್ಲು ಮುಳ್ಳುಗಳ ದುರ್ಗಮ ಹಾದಿಯ ಸವೆಸುತ ಹೊರಟೆ..
ಸರ್ವಸುಖವ ಅನುಭವಿಸಿದ ನಿನಗೆಂಥ ಪರೀಕ್ಷೆಯಯ್ಯ ರಾಮಾ..
ರಾಮಾ ನಿನಗೆ ಕಷ್ಟವೇತಕಯ್ಯ ರಾಮ ನಿನಗೆ ಕಷ್ಟವೇತಕಯ್ಯ
ಮಾಯಾಜಿಂಕೆಯ ರೂಪದಲ್ಲಿ ಬಂದ ದುಷ್ಟ ಅಸುರನು..
ಭಿಕ್ಷಾಂ ದೇಹಿ ಎಂದ ದುಷ್ಟ ರಾವಣನು ಸೀತಮಾತೆಯ ಅಪಹರಿಸಿದನು..
ಸೀತಾಮಾತೆಯ ವಿರಹ ವೇದನೆಯ ಕಾಡಿತಲ್ಲೋ ರಾಮಾ..
ರಾಮಾ ನಿನಗೆ ಕಷ್ಟವೇತಕಯ್ಯ ರಾಮ ನಿನಗೆ ಕಷ್ಟವೇತಕಯ್ಯ
ಅಗಸನ ಮಾತಿಗೆ ಬೆಲೆಕೊಟ್ಟು ಅತಿಕಷ್ಟದಿ ಸೀತಾಮಾತೆಯ
ಅಡವಿ ಪಾಲು ಮಾಡಬೇಕಾಯಿತಲ್ಲ ರಾಮಾ..
ಸೀತಮಾತೆಯ ಅನುಪಸ್ಥಿತಿಯಲ್ಲಿ ಮಾಡಿದೆಯಾ ಅಶ್ವಮೇಧ ಯಾಗವ..
ರಾಮಾ ನಿನಗೆ ಕಷ್ಟವೇತಕಯ್ಯ ರಾಮ ನಿನಗೆ ಕಷ್ಟವೇತಕಯ್ಯ
ಅಶ್ವವ ಕಟ್ಟಿ ಹಾಕಿದ ಲವಕುಶರೊಡನೆ ಸಮರದ ಪರಿಸ್ಥಿತಿಯೇನಯ್ಯ..
ರಾಮಾ ನಿನಗೆ ಕಷ್ಟವೇತಕಯ್ಯ ರಾಮ ನಿನಗೆ ಕಷ್ಟವೇತಕಯ್ಯ
ನಿನಗೆ ತಪ್ಪದ ಕಷ್ಟಗಳು ಹುಲುಮಾನವನಿಗೆ ತಪ್ಪದೆ..