ರಾಮ ದರ್ಶನ...
ಕವನ
ರಾಮ ನಿನ್ನ ಪುಣ್ಯ ಕರವ
ಇಟ್ಟೆ ನನ್ನ ಶಿರದಲಿ
ನಿನ್ನ ಪಾದ ಸ್ಪರ್ಶ ಗೈವ
ಆಸೆ ನನ್ನ ಮನದಲಿ
ನಾಮ ಸ್ಮರಣೆ ಮಾತ್ರದಿಂದ
ಪುಳಕಗೊಂಡಿತೀ ಮನ
ಪುಣ್ಯವಂತ ನಾನು ಇಂದು
ಪಡೆದೆ ನಿನ್ನ ದರ್ಶನ
ರಾಮನೊಲುಮೆ ಗಳಿಸಿದಾಗ
ಆಯ್ತು ಬದುಕು ಪಾವನ
ನಿತ್ಯ ನನ್ನ ಹೃದಯದಲ್ಲಿ
ಇರಿಸಿಕೊಂಡೆ ದೇವನ
ರಾಮಬಂಟ ಎನಿಸಿಕೊಂಡೆ
ನನ್ನ ಬಾಳು ಸಾರ್ಥಕ
ಸತತ ನಿನ್ನ ಸ್ಮರಣೆ ಗೈವೆ
ಹರಸು ವಿಶ್ವ ನಾಯಕ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್