ರಾಮ ನಾಮವ ಜಪಿಸೊ
ಕವನ
ಮನದೊಳಗೆ ತುಂಬಿಸಿರುವೆ ಹರೇ ರಾಮ ನಾಮ
ತನುವೊಳಗೆ ಹರಡಿಸಿರುವೆ ಹರೇ ರಾಮ ನಾಮ
ನೆಲದೊಳಗೆ ಹಬ್ಬಿಸಿರುವೆ ಹರೇ ರಾಮ ನಾಮ
ಗಿಡದೊಳಗೆ ಉಳಿಸಿರುವೆ ಹರೇ ರಾಮ ನಾಮ
ನಡೆಯೊಳಗೆ ಸೇರಿಸಿರುವೆ ಹರೇ ರಾಮ ನಾಮ
ನುಡಿಯೊಳಗೆ ಬೆರೆಸಿರುವೆ ಹರೇ ರಾಮ ನಾಮ
ಜ್ಞಾನದೊಳಗೆ ಇರಿಸಿರುವೆ ಹರೇ ರಾಮ ನಾಮ
ಪ್ರಾಣದೊಳಗೆ ಕೂರಿಸಿರುವೆ ಹರೇ ರಾಮ ನಾಮ
***
ಬಾರೆಲೆ ಹಕ್ಕಿಯೆ
ಹಾರುತ ಹಾರುತ ಬಾರೆಲೆ ಹಕ್ಕಿಯೆ
ಬಣ್ಣದ ಹಕ್ಕಿಯೆ ಚೆಂದದ ಹಕ್ಕಿಯೆ
ಬಾನೊಳು ರೆಕ್ಕೆಯ ಬಿಚ್ಚುತ ಹಾರುವೆ
ಸೂರ್ಯನ ಕಡೆಗೋ ಹಾರುತ ಹೋಗುವೆ
ಚೆಲುವಿನ ಮುದ್ದಿನ ನನ್ನಯ ಹಕ್ಕಿಯೆ
ನನ್ನೊಡನಾಡಲು ಬಾರೆಯ ನೆಗೆಯುವೆ
ಸುಂದರ ಹಾಡನು ಕುಣಿಸುತ ಹಾಡುವೆ
ಮೆರೆಸುತ ನಿನ್ನನು ಸುತ್ತಲು ನಲಿಸುವೆ
ತಾಯಿಯು ನೀಡಿದ ತಿನಿಸನು ನೀಡುವೆ
ನೀರಿನ ಪಾತ್ರೆಯ ಹತ್ತಿರವಿಡುವೆ
ತಿನಿಸನು ತಿಂದು ನೀರನು ಕುಡಿಯುವೆ
ಥಕ ಥೈ ಎನ್ನುತ ಮನದಲಿ ನೆಲೆಸುವೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್