ರಾಷ್ಟ್ರಕವಿ ಕುವೆಂಪು ನೆನಪು
ಕವನ
ದೇವರು ರುಜು ಮಾಡಿದನಜ್ಜ ‘ನೀ’ ವಿಶ್ವಕವಿಯೆಂದು
ಕಂಡರು ಬೇಂದ್ರೆ ನುಡಿದರಜ್ಜ ‘ನೀ’ ಯುಗದ ಕವಿಯೆಂದು ॥ಪ॥
ಕುವೆಂಪು ಅಜ್ಜ, ನಾಡಿನ ರಸಋಷಿ ‘ನೀ’ ಅಜ್ಜ
ನಿನ್ನ ವೈಚಾರಿಕ ನಿಲುವು, ‘ನಂದಾದೀಪ’ ಅಜ್ಜ । ಕುವೆಂಪು ಅಜ್ಜ ।
ನಿನ್ನ ಪ್ರಕೃತಿ ‘ಉಪಾಸನೆ’ ಪರಾಕಾಷ್ಟತೆಯ ಆರಾಧನೆ ಅಜ್ಜ
ನಿನ್ನ ವಿಶ್ವಮಾನವ ಸಂದೇಶ ಮಾನವರಾಗಿ ತಿಳಿಯಲೇ ಬೇಕು ಅಜ್ಜ ॥೧॥
ನೀ ಕೊಟ್ಟ ನಾಡಗೀತೆ ಕನ್ನಡಮ್ಮನ ಮುತ್ತಿನಹಾರ ಅಜ್ಜ
ನಿನ್ನೀ ಮುತ್ತಿನಹಾರ ಮೂಲೋಕದಲ್ಲೂ ಸಿಗದದ್ದು ಅಜ್ಜ । ಕುವೆಂಪು ಅಜ್ಜ ।
ನಾಡತಾಯಿಯ, ಪುರುಷಮಣಿ ನೀ ಅಜ್ಜ,
ನಿನ್ನೀ ಸ್ವರುಶ ಕರುನಾಡು ಸುವರ್ಣ ನಾಡಾಯಿತು ಅಜ್ಜ ॥೨॥
ನಿನ್ನ ಜ್ಞಾನಾಳದಲ್ಲಿ ಮುತ್ತುರತ್ನ ಹುದುಗಿಹವು ಅಜ್ಜ
ನನ್ನ ಅಜ್ಞಾನದ ನಿಲುವಲ್ಲಿ ಸಿಗುವುದು ಹೇಗೆ? ಅಜ್ಜ । ಕುವೆಂಪು ಅಜ್ಜ।
ನಿನ್ನ ದಿವ್ಯಚಕ್ಷುವಲಿ ವಿಶ್ವರೂಪ ‘ನೀ’ ಕಂಡೆ ಅಜ್ಜ
ನನ್ನ ಅಂಧತ್ವದಲ್ಲಿ ‘ನೀ’ ಕಂಡ ವಿಶ್ವರೂಪ ‘ನಾ’ ಕಾಣುವುದು ಹೇಗೆ? ಅಜ್ಜಾ ! ॥೩॥
-ಜಂಬರಗಟ್ಟಿ ಟಿ.ಮಂಜಪ್ಪ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್