ರಾಷ್ಟ್ರಪತಿ ಬೆನ್ನಟ್ಟಿದ ನಿಗೂಢ ಕಾರು

ರಾಷ್ಟ್ರಪತಿ ಬೆನ್ನಟ್ಟಿದ ನಿಗೂಢ ಕಾರು

ಬರಹ

ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಇವರನ್ನು ಹತ್ಯೆ ಮಾಡುವುದಾಗಿ ಮೇಲಿಂದ ಮೇಲೆ ಇ-ಮೈಲ್ ಕಳಿಸಿದ ಮೇಲೆ ರಕ್ಷಣೆಯನ್ನು ಬಿಗಿಗೊಳಿಸಿದ ರಕ್ಷಣಾಧಿಕಾರಿಗಳು ಪುಣೆಯಲ್ಲಿ ರಾಷ್ಟ್ರಪತಿಯವರು ರಾಜಭವನಕ್ಕೆ ತೆರಳುವ ೪೫ ನಿಮಿಷಗಳ ಮೊದಲು ನಕಲಿ ರಾಷ್ಟ್ರಚಿಹ್ನೆಯನ್ನು ಹಾಕಿ ಅವರ ಕಾರನ್ನು ಹಿಂಬಾಲಿಸುತ್ತಿರುವ ಆ ಕಾರನ್ನು ಅಡ್ಡಗಟ್ಟಿ ತಪಾಸಣೆ ಮಾಡುವಾಗ ಅದರಲ್ಲಿದ್ದ ಇಬ್ಬರು ಶಂಕಿತರು ಪರಾರಿಯಾಗಿ ತಪ್ಪಿಸಿಕೊಂಡರು. ಆ ಕಾರಿನಲ್ಲಿ ಒಬ್ಬ ಗಂಡಸು ಮತ್ತು ಒರ್ವ ಮಹಿಳೆ ಇದ್ದಳು. ಗಂಡಸಿನ ಗುರುತು ಪತ್ತೆಯಾಗಿದ್ದು ಅವನಿಗಾಗಿ ಶೋಧ ಮುಂದುವರಿಯುತ್ತದೆ. ಅವರನ್ನು ಹೊತ್ತ ಕಾರು ಮಾರುತಿ ಸ್ವಿಫ್ಟ (ಡಿಎಲ್- ೯ಸಿಐ ೨೧೪೦) ವಶಪಡಿಸಲಾಗಿದೆ ಎಂಬ ಸುದ್ಧಿ ಉದಯವಾಣಿ ಪತ್ರಿಕೆಯಲ್ಲಿ ಓದಿ ಆಶ್ಚರ್ಯವಾಯಿತು. ರಾಷ್ಟ್ರಪತಿಯವರಿಗಾಗಿ ಇರುವ ರಕ್ಷಣಾಧಿಕಾರಿಗಳು ಇಬ್ಬರು ಶಂಕಿತರು ಇರುವ ಕಾರನ್ನು ಅಡ್ಡಗಟ್ಟಿ ತಪಾಸಣೆ ಮಾಡುತ್ತಾ ಇರುವಾಗ ಇಬ್ಬರು ಶಂಕಿತರು ತಪ್ಪಿಸಿಕೊಂಡು ಪರಾರಿಯಾದರು ಎಂದರೆ ಆಶ್ಚರ್ಯವಲ್ಲವೇ? ಕಣ್ಣೆದುರೇ ಪರಾರಿಯಾಗುವಾಗ ಅಧಿಕಾರಿಗಳು ಏನು ಮಾಡುತ್ತಿದ್ದರು? ಶಂಕಿತರಿಗೆ ಇಂದ್ರಜಾಲವೇನಾದರೂ ಗೊತ್ತಿತ್ತೊ? ಅದೃಶ್ಯರಾಗಿ ಪರಾರಿಯಾಗಲು.
ನಂಬಿದರೆ ನಂಬಿ. ಹೀಗೂ......... ಉಂಟೇ?
ಬಿ. ವೆಂಕಟ್ರಾಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet