ರುದ್ರನರ್ತನ

ರುದ್ರನರ್ತನ

ಕವನ

ಏನಿದೇನಿದು ಪ್ರಕೃತಿಯ ರುದ್ರ ನರ್ತನ

ಅಟ್ಟಹಾಸವೇನು ಪ್ರಳಯಾಂತಕನ                       

ಬೀಸಿ ಬರುವ ಶರವೇಗದ ಗಾಳಿ 

ಕೇಕೆ ಹಾಕಿ ಗಹಗಹಿಸಿ ನಕ್ಕಿತು ಎದ್ದೇಳಿ

 

ಜೀವ ಜಗತ್ತಿನ ಕೊನೆಯ ಮುನ್ಸೂಚನೆಯೇ

ಮನುಜನ ಸ್ವಾರ್ಥದ ಪರಿಣಾಮವೇ

ಬಿಡದೆ ಸುರಿವ ವರ್ಷಧಾರೆಗೆ ಕೊನೆಯಿಲ್ಲವೇ

ಹೊಟ್ಟೆಗೆ ತಣ್ಣೀರು ಬಟ್ಟೆ ಗತಿಯೇ

 

ಮನೆ ಮಠ ಜೋಪಡಿ ಗುಡಿಸಲು 

ಎಲ್ಲೆಂದರಲ್ಲಿ ತೇಲುತಿದೆ ಜಲರಾಶಿಯಲಿ

ತ್ರಿಚಕ್ರಗಾಡಿ ಕಾರು ವಾಹನಗಳಿಲ್ಲಿ 

ಮುಳುಗೇಳುತ್ತಿದೆ ಬದುಕಿಗೆ ನೆಲೆಯೆಲ್ಲಿ

 

ಹಸಿರು ಗಿಡ ಮರಗಳ ಕಡಿದುರುಳಿಸಿ

ಸ್ಮಶಾನ ಪ್ರೇತ ನರ್ತನ ಬುವಿಯಾಗಿಸಿ

ತಾಯೊಡಲ ಬಗೆದು ಕಣ್ಣೀರು ಹರಿಸಿ

ಗುಡಿಸಿ ನೆನೆಸಿ ಗುಂಡಾಂತರಗೊಳಿಸಿ 

 

ರೈತಾಪಿ ಜನರ ದುಡಿಮೆಯ ಬೆವರೆಲ್ಲ

ನೆಲಕಚ್ಚಿ ಸರ್ವನಾಶವಾಯಿತು ಬೆಳೆಯೆಲ್ಲ

ಭಗವಂತ ಮುನಿಸ್ಯಾಕೆ ನಮ್ಮ ಮೇಲೆಲ್ಲ

ಹೇಗೆ ಜೀವಿಸಲಿ ಮುಂದೆ ನಾವುಗಳೆಲ್ಲ

 

-ರತ್ನಾ ಕೆ ಭಟ್ ತಲಂಜೇರಿ

 ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್