ರುಬಾಯಿಗಳ ಲೋಕ
ಕವನ
ಬಾವನೆ ಇರುವಲ್ಲಿ ಪ್ರೀತಿ ತಾನ್ ಬರುವುದು
ಖುಷಿಯ ವಿಚಾರಗಳು ನಮ್ಮೊಳಗೆ ಇರುವುದು
ಏನನ್ನು ಸಾಧಿಸಬಹುದು ದ್ವೇಷ ಅಸೂಯೆಯಿಂದ
ಕೈಹಿಡಿದು ಸಾಗುತಿರೆ ಒಲವಿಂದು ಸೇರುವುದು
*
ಉಪ್ಪು ಖಾರ ಹುಳಿ ತಿಂದ ದೇಹವು
ತಪ್ಪು ಮಾಡಿದರೂ ಒಳ ಮರೆವು
ಮಾಡುತ್ತಾ , ಇನ್ನೊಬ್ಬನ ತಪ್ಪ ಹೇಳಿದರೆ
ಸತ್ಯಕ್ಕೂ ಮತ್ತೆ ಬಂದೀತೆ ಅರಿವು
*
ಜೀವನವು ಜಂಜಾಟ
ಬದುಕಿನಲಿ ಬರಿಯಾಟ
ಹೊತ್ತಾರೆ ಎದ್ದರೂ
ಬಾಳಿನೊಳು ಗೋಳಾಟ
*
ಯಾರು ದೊಡ್ಡವರು ಸಣ್ಣವರು ಯಾರದು
ಅವರವರ ಕೌಶಲ್ಯವು ಅವರವರಿಗೆ ಇಹುದು
ಸಣ್ಣತನ ತೋರದಿರಿ ನೀವಿಂದು ದೊಡ್ಡವರೆ
ಅವರಿಂದಲೂ ಸಣ್ಣವರೆ ಮನದೊಳಗೆಯಿಂದು
-ಹಾ. ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಅಂತರ್ಜಾಲ ತಾಣ
ಚಿತ್ರ್
