ರೂಪದ ಒಡತಿಗೆ ನಾ ಒಮ್ಮೆ ಕೇಳಿದೆ..
ಕವನ
ಸೌಂದರ್ಯದ ಲಹರಿಯೇ
ಮುತ್ತಿನ ಸಿಂಗಾರಿಯೇ
ಬಂಗಾರದ ಹುಡುಗಿಯನ್ನು ನಾ ಒಮ್ಮೆ ಕೇಳಿದೆ
ಚೆಲುವಿನ ಚಿತ್ತಾರವೇ
ರಂಬೆ ಊರ್ವಶಿ ಮೇನಕೆಯೇ
ಚೆಂದಾದ ಗೊಂಬೆಯನ್ನು ನಾ ಒಮ್ಮೆ ಕೇಳಿದೆ
ಬೆಳಂದಿಗಳ ಬಾಲೆಯೇ
ಸುಂದರ ಹೂವಿನ ಪರಿಮಳವೇ
ಶಿಲ್ಪಿಯು ಕೆತ್ತಿರುವ ಶಿಲಾಬಾಲೆಯನ್ನು ನಾ ಒಮ್ಮೆ ಕೇಳಿದೆ
ಮಧುರ ನಾದದಿಂದ
ಪ್ರೀತಿ ಮಾತುಗಳಿಂದ
ದೇವರು ಸೃಷ್ಟಿಸಿದ ಹುಡುಗಿಯೇ
ಸೌಂದರ್ಯದ ಕಾಣಿಕೆಯೆಂದು ನಾ ಒಮ್ಮೆ ಕೇಳಿದೆ ..