ರೂಮಿ ತನ್ನ ಪ್ರೇಮಿಯನ್ನು ಕೂಡಿಕೊಂಡ ರಾತ್ರಿ
ಕವನ
ಮವ್ಲಾನ ಜಲಾಲ್ ಅಲ್-ದಿನ್ ಅಲ್-ರೂಮಿ ಕಾಲಾತೀತರಾಗಿದ್ದು 1273ನೇ ಇಸವಿ ಡಿಸೆಂಬರ್ 17ರಂದು. ಈ ದಿನವನ್ನು ಶೇಬ್-ಐ-ಅರುಸ್(ದಿಬ್ಬಣದ ದಿನ) ಎಂದು ಕರೆಯಲಾಗುತ್ತದೆ. ಪ್ರತಿ ಡಿಸೆಂಬರ್ 17ನೇ ದಿವಸವನ್ನು ರೂಮಿ ತನ್ನ ಪ್ರೇಮಿಯನ್ನು ಕೂಡಿಕೊಂಡ ರಾತ್ರಿ ಎಂದು ಆಚರಿಸಲಾಗುತ್ತದೆ.
ಕೆಳಗಿರುವ ಸಾಲುಗಳು ಇಂಗ್ಲಿಶ್ ಸಾಲುಗಳ ಅನುವಾದ. ರೂಮಿಯ ಲೆಕ್ಕವಿಲ್ಲದ ಪ್ರೇಮಿಗಳಲ್ಲಿ ಒಬ್ಬನಾದ ನಾನು ಈ ಅನುವಾದದ ಮೂಲಕ ಕಾಲಾತೀತನಾದ ರೂಮಿಗೆ ನನ್ನ ಪ್ರೇಮ ಸಂದಾಯ ಮಾಡುತ್ತಿದ್ದೇನೆ.
ನಾನು ಕಾಲವಾದಾಗ
ನನ್ನ ಶವವನ್ನು
ತೆಗೆದುಕೊಂಡು ಹೋದಾಗ
ನೀನೆಂದೂ ಅಂದುಕೊಳ್ಳಬೇಡ
ನಾನು ಈ ಲೋಕವನ್ನು ತೊರೆದೆನೆಂದು
ಎಂದೂ ಕಂಬನಿಗರೆಯಬೇಡ
ಗೋಳಿಡಬೇಡ
ವ್ಯಥೆ ಪಡಬೇಡ
ನಾನೇನೂ ರಕ್ಕಸನ ಕೂಪಕ್ಕೆ
ಬೀಳುತ್ತಿಲ್ಲ
ನನ್ನ ಶವ
ಕೊಂಡೊಯ್ಯುವುದನ್ನು ನೀ ಕಂಡರೆ
ನನ್ನ ಅಗಲಿಕೆಗೆ ಅಳಬೇಡ
ನಾನು ನಿನ್ನ ಅಗಲುತ್ತಿಲ್ಲ
ನಾನು ನಿರಂತರ ಪ್ರೇಮದೆಡೆಗೆ ಬರುತ್ತಿರುವೆ
ನೀ ನನ್ನ
ಗೋರಿಯಲ್ಲಿ ಬಿಟ್ಟು ತೆರಳುವಾಗ
ವಿದಾಯ ಹೇಳಬೇಡ
ನೆನಪಿರಲಿ, ಗೋರಿಯೊಂದು
ಸ್ವರ್ಗದ ಹಿಂದಿರುವ ಪರದೆಯಂತೆ
ನೀನು ನಾನು ಗೋರಿಗಿಳಿಯುದಷ್ಟೆ
ಕಾಣುವೆ
ಈಗ ನಾನು ಏಳುವುದನ್ನೂ ನೋಡು
ಸೂರ್ಯ ಮುಳುಗುವಾಗ
ಚಂದ್ರ ಇಳಿಯುವಾಗ
ಕೊನೆಯಾಗಲು ಹೇಗೆ ಸಾಧ್ಯ
ಇದು ಕೊನೆಯಂತೆ ಕಾಣುತಿಹುದು
ಇದು ಸೂರ್ಯಾಸ್ತದಂತೆ ಕಾಣಬಹುದು
ಆದರೆ ದಿಟವಾಗಿ ಇದೊಂದು ಬೆಳಗು
ಗೋರಿ ನಿನ್ನ ಬಂಧಿಸಿದಾಗಲೇ
ನಿನ್ನ ಚೇತನ ಮುಕ್ತವಾಗುವುದು
ನೀನೆಂದಾದರೂ ಕಂಡಿರುವೆಯಾ
ಭೂಮಿಗೆ ಬಿದ್ದ ಬೀಜವೊಂದು
ಹೊಸ ಜೀವ ಪಡೆಯದ್ದನ್ನು
ಮಾನವನೆಂಬ ಬೀಜ ಹುಟ್ಟು ಪಡೆವುದನು
ನೀನೇಕೆ ಸಂಶಯಿಸುವೆ
ಬಾವಿಗೆ ಬಿದ್ದ ಕೊಡ
ನೀರು ತರದೆ ಖಾಲಿ ಬರುವುದನು
ಎಂದಾದರೂ ಕಂಡಿರುವೆಯೇನು
ಆತ್ಮವೊಂದು
ಜೋಸೆಫನಂತೆ ಬಾವಿಯಿಂದ
ಮತ್ತೆ ಬರುವಾಗ
ಏಕೆ ಅಳುವೆ
ನೀನು ಕಡೆಯದಾಗಿ
ನಿನ್ನ ಬಾಯಿ ಮುಚ್ಚಿದ ಚಣ
ನಿನ್ನ ನುಡಿ ನಿನ್ನ ಚೇತನ
ಸ್ಥಳ ಕಾಲವನ್ನು ಮೀರಿದ
ಜಗಕೆ ಸೇರುವುದು
ಕೆಳಗಿರುವ ಸಾಲುಗಳು ಇಂಗ್ಲಿಶ್ ಸಾಲುಗಳ ಅನುವಾದ. ರೂಮಿಯ ಲೆಕ್ಕವಿಲ್ಲದ ಪ್ರೇಮಿಗಳಲ್ಲಿ ಒಬ್ಬನಾದ ನಾನು ಈ ಅನುವಾದದ ಮೂಲಕ ಕಾಲಾತೀತನಾದ ರೂಮಿಗೆ ನನ್ನ ಪ್ರೇಮ ಸಂದಾಯ ಮಾಡುತ್ತಿದ್ದೇನೆ.
ನಾನು ಕಾಲವಾದಾಗ
ನನ್ನ ಶವವನ್ನು
ತೆಗೆದುಕೊಂಡು ಹೋದಾಗ
ನೀನೆಂದೂ ಅಂದುಕೊಳ್ಳಬೇಡ
ನಾನು ಈ ಲೋಕವನ್ನು ತೊರೆದೆನೆಂದು
ಎಂದೂ ಕಂಬನಿಗರೆಯಬೇಡ
ಗೋಳಿಡಬೇಡ
ವ್ಯಥೆ ಪಡಬೇಡ
ನಾನೇನೂ ರಕ್ಕಸನ ಕೂಪಕ್ಕೆ
ಬೀಳುತ್ತಿಲ್ಲ
ನನ್ನ ಶವ
ಕೊಂಡೊಯ್ಯುವುದನ್ನು ನೀ ಕಂಡರೆ
ನನ್ನ ಅಗಲಿಕೆಗೆ ಅಳಬೇಡ
ನಾನು ನಿನ್ನ ಅಗಲುತ್ತಿಲ್ಲ
ನಾನು ನಿರಂತರ ಪ್ರೇಮದೆಡೆಗೆ ಬರುತ್ತಿರುವೆ
ನೀ ನನ್ನ
ಗೋರಿಯಲ್ಲಿ ಬಿಟ್ಟು ತೆರಳುವಾಗ
ವಿದಾಯ ಹೇಳಬೇಡ
ನೆನಪಿರಲಿ, ಗೋರಿಯೊಂದು
ಸ್ವರ್ಗದ ಹಿಂದಿರುವ ಪರದೆಯಂತೆ
ನೀನು ನಾನು ಗೋರಿಗಿಳಿಯುದಷ್ಟೆ
ಕಾಣುವೆ
ಈಗ ನಾನು ಏಳುವುದನ್ನೂ ನೋಡು
ಸೂರ್ಯ ಮುಳುಗುವಾಗ
ಚಂದ್ರ ಇಳಿಯುವಾಗ
ಕೊನೆಯಾಗಲು ಹೇಗೆ ಸಾಧ್ಯ
ಇದು ಕೊನೆಯಂತೆ ಕಾಣುತಿಹುದು
ಇದು ಸೂರ್ಯಾಸ್ತದಂತೆ ಕಾಣಬಹುದು
ಆದರೆ ದಿಟವಾಗಿ ಇದೊಂದು ಬೆಳಗು
ಗೋರಿ ನಿನ್ನ ಬಂಧಿಸಿದಾಗಲೇ
ನಿನ್ನ ಚೇತನ ಮುಕ್ತವಾಗುವುದು
ನೀನೆಂದಾದರೂ ಕಂಡಿರುವೆಯಾ
ಭೂಮಿಗೆ ಬಿದ್ದ ಬೀಜವೊಂದು
ಹೊಸ ಜೀವ ಪಡೆಯದ್ದನ್ನು
ಮಾನವನೆಂಬ ಬೀಜ ಹುಟ್ಟು ಪಡೆವುದನು
ನೀನೇಕೆ ಸಂಶಯಿಸುವೆ
ಬಾವಿಗೆ ಬಿದ್ದ ಕೊಡ
ನೀರು ತರದೆ ಖಾಲಿ ಬರುವುದನು
ಎಂದಾದರೂ ಕಂಡಿರುವೆಯೇನು
ಆತ್ಮವೊಂದು
ಜೋಸೆಫನಂತೆ ಬಾವಿಯಿಂದ
ಮತ್ತೆ ಬರುವಾಗ
ಏಕೆ ಅಳುವೆ
ನೀನು ಕಡೆಯದಾಗಿ
ನಿನ್ನ ಬಾಯಿ ಮುಚ್ಚಿದ ಚಣ
ನಿನ್ನ ನುಡಿ ನಿನ್ನ ಚೇತನ
ಸ್ಥಳ ಕಾಲವನ್ನು ಮೀರಿದ
ಜಗಕೆ ಸೇರುವುದು
ಚಿತ್ರ್