ರೇಟಿಂಗ್ ಫಾರ್ ರೈಟಿಂಗ್
ಬರಹದ ಮೌಲ್ಯವನ್ನು ಅಳೆಯಲು ನಾವು ಬೇರೆ ಬೇರೆ ರೀತಿಯ ಮೌಲ್ಯಮಾಪನ, ಬಳಸುತ್ತೇವೆ. ಬರಹಗಳಲ್ಲಿ ಇದರ ಪ್ರಾಮುಖ್ಯತೆ ಬಹಳವಾದುದು. ಯಾವುದೇ ಬರಹಗಳು ಓದುಗನ ಮೇಲೆ ಯಾವ ರೀತಿಯಲ್ಲಾದರೂ ಪ್ರಭಾವ ಬೀರಬಹುದು. ಇದು ಓದುಗನ ಮನೋಸ್ಥಿತಿಯನ್ನು ಅವಲಂಬಿಸಿರುತ್ತದೆ. ಹಾಗಾಗಿ ಇದು ಓದುಗ ಹಾಗೂ ಲೇಖಕನ ನಡುವಿನ ಭಾಂದವ್ಯವನ್ನು ಬೆಸೆಯುವ ಕೊಂಡಿಯೇ ಈ ಮೌಲ್ಯಮಾಪನ ಅಥವಾ ಪ್ರತಿಕ್ರಿಯೆ.
ಉಪಯೋಗ ಏನು?
ಓದುಗನು ತಾನು ಓದಿದ ಬರಹದ ಬಗೆಗೆ ಆತನ ಅಭಿಪ್ರಾಯವನ್ನು, ಅನಿಸಿಕೆಯನ್ನು ವ್ಯಕ್ತಪಡಿಸಿದಾಗ ಲೇಖಕನಿಗೆ ತನ್ನ ಬರಹ ಹೇಗಿದೆ? ಉತ್ತಮವೇ ಆಥವಾ ಇನ್ನೂ ಬರಹದಲ್ಲಿ ಸುಧಾರಿಸಿಕೊಳ್ಳಬೇಕೇ? ಇತ್ಯಾದಿ ವಿಷಯಗಳನ್ನು ತಿಳಿದುಕೊಳ್ಳಲು ಸುಲಭವಾಗುತ್ತದೆ. ಇದರಿಂದಾಗಿ ಆತನ ಬರವಣಿಗೆಯ ಮಟ್ಟವೂ ಉತ್ತಮವಾಗುತ್ತದೆ. ಕೇವಲ ಬರಹ ರೂಪದಲ್ಲಿ ಅಭಿಪ್ರಾಯ ತಿಳಿಸುವುದು ಮಾತ್ರವಲ್ಲ ಇದು ಕಷ್ಟವೆನಿಸಿದಾಗ ಸಾಂಕೇತಿಕ ಚಿಹ್ನೆಗಳ ಮೂಲಕ ಅವುಗಳನ್ನು ಅಭಿಪ್ರಾಯಿಸಬಹುದು. ಸಂಪದದಲ್ಲಿ ಬರಹಗಳನ್ನು ಮೌಲ್ಯಮಾಪನ ಮಾಡಲು ನಕ್ಷತ್ರದ ಚಿಹ್ನೆಯನ್ನು ಬಳಸಲಾಗಿದೆ.
ಸಂಪದದಲ್ಲಿ ಲೇಖನಗಳನ್ನು ಓದಿದ ನಂತರ "ಈ ಬರಹ ನಿಮಗೆ ಇಷ್ಟವಾಯಿತೇ ಎಂಬ ಸಾಲುಗಳ ಎದುರು ನಕ್ಷತ್ರದ ಚಿಹ್ನೆಗಳು ಕಾಣಿಸುತ್ತವೆ. ಅದಕ್ಕೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಪ್ರತಿಸ್ಪಂದನೆ ದಾಖಲಾಗಿರುತ್ತದೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರತಿಸ್ಪಂದನೆಗಳು ದಾಖಲಾದ ಬರಹಗಳನ್ನು ಉತ್ತಮ ಬರಹಗಳೆಂದು ನಾವು ಪರಿಗಣಿಸಬಹುದು ಹಾಗೆಯೇ ಎಷ್ಟು ಮಂದಿಯಿಂದ ಓದಲ್ಪಟ್ಟಿದೆ ಎಂಬುದನ್ನೂ ತಿಳಿದುಕೊಳ್ಳಬಹುದು. ಹೆಚ್ಚು ಹೆಚ್ಚು ಪ್ರತಿಸ್ಪಂದನೆಗಳು ಬಂದಾಗ ಬರಹಗಾರರಿಗೂ ಅದು ಉತ್ತಮ ಸ್ಪೂರ್ತಿದಾಯಕವಾಗಿರುತ್ತದೆ. ಹಾಗಾಗಿ ಬರಹಗಳನ್ನು ಓದಿದ ಕೂಡಲೇ ಪ್ರತಿಸ್ಪಂದನೆಗಳನ್ನು ನೀಡುವ ಅವಕಾಶಗಳು ಇದ್ದಲ್ಲಿ ಅದನ್ನು ನಮ್ಮದಾಗಿಸಿಕೊಳ್ಳೋಣ, ಬರಹಗಾರರನ್ನು ಹುರಿದುಂಬಿಸೋಣ.
Comments
ಮಮತಾ ಕಾಪುರವರೆ
In reply to ಮಮತಾ ಕಾಪುರವರೆ by partha1059
ಧನ್ಯವಾದಗಳು ಪಾರ್ಥ ಸರ್,