ರೇಡಿಯೋ ಗಿರ್ಮಿಟ್ : ಅಂತರ್ಜಾಲದಲ್ಲಿ ಕನ್ನಡ ರೇಡಿಯೋ

ರೇಡಿಯೋ ಗಿರ್ಮಿಟ್ : ಅಂತರ್ಜಾಲದಲ್ಲಿ ಕನ್ನಡ ರೇಡಿಯೋ

ಬರಹ

ರೇಡಿಯೋ ಗಿರ್ಮಿಟ್ ಒಂದು ವಿಭಿನ್ನವಾದ ಅಂತರ್ಜಾಲ ರೇಡಿಯೋ ಸ್ಟೇಷನ್. ಇದರ ಮುಖ್ಯ ಉದ್ದೇಶ, ಪ್ರಪಂಚದಾದ್ಯಂತ ಹರಡಿರುವ ಕನ್ನಡ ಪ್ರೇಮಿಗಳನ್ನು ಸಂಗೀತದ ಮೂಲಕ ಒಂದು ಗೂಡಿಸುವುದಾಗಿದೆ. ವಾರದ ೭ ದಿನ ೨೪ ಘಂಟೆ ಸಂಗೀತದ ಸುಧೆಯನ್ನು ಹರಿಸುತ್ತಿರುವ ಈ ರೇಡಿಯೋ, ಬೇರೆ ಬೇರೆ ವಿಷಯಗಳಿಗೆ ಸಂಬಧಪಟ್ಟ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನೂ ಪ್ರಸ್ತುತ ಪಡಿಸುತ್ತದೆ. ತನ್ನ ಸರಳವಾದ ವೆಬ್ ಪೇಜ್ ಇಂದಾಗಿ ಈಗಾಗಲೇ ೮೦ಕ್ಕೂ ಹೆಚ್ಚ್ಚಿನ ದೇಶಗಳಿಗೆ ತಲುಪಿರುವ ಈ ರೇಡಿಯೋ ಇನ್ನು ಹೆಚ್ಚು ಹೆಚ್ಚು ಪ್ರಸಿದ್ಧಿಯನ್ನು ಪಡೆಯುತ್ತಿದೆ.
ಇದರಲ್ಲಿ ಪ್ರಸಾರವಾಗುತ್ತಿರುವ ಜನಪ್ರೀಯ ಕಾರ್ಯಕ್ರಮಗಳೆಂದರೆ, ಭಾವಗೀತೆಗಳ ಭಾವಸಿಂಚನ, ಹೊಸ ಹಾಡುಗಳ ಗಿರ್ಮಿಟ್ ೧೦ರಿಂದ ೧, ಉತ್ತರ ಕನ್ನಡ ಶೈಲಿಯಲ್ಲಿ ಮಾತನಾಡುವ RJ ನಡೆಸಿ ಕೊಡುವ ಹನಿ ಹನಿ, ಸಾಮಾನ್ಯ ಜ್ಞ್ಯಾನದ ನಿಮಗಿದು ಗೊತ್ತಾ? ಕನ್ನಡ ಚಿತ್ರೋದ್ಯಮದ ಬಗ್ಗೆ ಮಾಹಿತಿ ನೀಡುವ ಚಟಪಟ ಸುದ್ದಿ ಮುಂತಾದವು. ಇಷ್ಟೇ ಅಲ್ಲದೆ ಚಿತ್ರೋದ್ಯಮದ ಹಲವಾರು ಪ್ರಸಿದ್ದ ನಟ ನಟಿಯರ ಸಂದರ್ಶನ ಕೂಡ ಇಲ್ಲಿಕೇಳಬಹುದಾಗಿದೆ.
ಈ ರೇಡಿಯೋವನ್ನು i -ಫೋನ್ ಅಲ್ಲೂ ಕೂಡ ಕೇಳಬಹುದಾಗಿದೆ.
ನೀವು ಒಮ್ಮೆ ಕೇಳಿ ನೋಡಿ, ವಿಳಾಸ ಇಲ್ಲಿದೆ : http://www.radiogirmit.com