ರೈಟ್ ನಂಬರ್ (ಭಾಗ ೧)
ಮುಂಜಾನೆಯ ಹೊತ್ತು. ಸೂರ್ಯನ ತಂಪಾದ ಕಿರಣಗಳು ಭೂಮಿಯನ್ನು ಸ್ಪರ್ಶಿಸುವ ಹೊತ್ತು. ರಮೇಶ್ ಜಾಗಿಂಗ್‌ಗೆ ಹೋಗಿರುವರು. ಬೆಳಗಿನ ತಣ್ಣನೆಯ ವಾತಾವರಣದಲ್ಲಿ ಜಾಗಿಂಗ್ ಮಾಡಿ, ಮನೆಗೆ ಬಂದರು. ಬಂದವರೇ ತಮ್ಮ ಮುದ್ದಿನ ಮಗನ ಕೋಣೆಗೆ ಹೋದರು.
ಗಂಟೆ ೮ ಆಯಿತು. ಇನ್ನು ಎದ್ದಿಲ್ಲ. ನಾನು ಜಾಗಿಂಗ್ ಹೋಗಿ ಬಂದೆ. ನಿನಗೆ ಇನ್ನೂ ಬೆಳಗಾಗಿಲ್ವಾ? ಎಂದು ಮಗನನ್ನು ತಟ್ಟಿ ಎಬ್ಬಿಸಿ, ಅವನನ್ನು ಸ್ನಾನಕ್ಕೆ ಕಳುಹಿಸಿದರು.
ರಜತ್ ಸ್ನಾನ ಮುಗಿಸಿ ರೆಡಿಯಾಗಿ ಕೆಳಗೆ ಬಂದನು. ರಜತ್ ಆರು ಅಡಿ ಎತ್ತರದ ಸುಂದರ ಮೊಗವುಳ್ಳ ಹುಡುಗ. ಇವನು ಇಂಜಿನಿಯರಿಂಗ್ ಮಾಡಿ ಈಗ ಕೆಲಸಕ್ಕೆ ಹೋಗುತ್ತಾನೆ. ಇಂತಹ ಮುದ್ದಾದ ಮಗನಿಗೆ ಮದುವೆ ಮಾಡಬೇಕೆಂಬ ಬಯಕೆ ರಮೇಶ್ ಗೆ.
ರಜತ್ ಬಂದಾಗ, ಎಷ್ಟು ದಿನ ಅಂತ ಆ ಎಲ್ಲಾ ಕೆಲಸ ಮಾಡುವುದು. ಅಮ್ಮ ಬಿಟ್ಟು ಹೋದ ಮೇಲೆ ಎಲ್ಲಾ ಕೆಲಸ ನನಗೆ ಮಾಡಿ ಮಾಡಿ ಸಾಕಾಗಿದೆ. ಬೇಗ ನೀನು ಮದುವೆ ಮಾಡಿಕೋ. ನನಗೆ ಸಾಕಾಗಿದೆ ಎಂದಾಗ,
ರಜತ್ " ನಾನು ಇಷ್ಟಪಡುವ ಹುಡುಗಿ ಸಿಗುವಾಗ ಆಗುತ್ತೇನೆ" ಎಂದು ತಂದೆ ಮಾತಿಗೆ ಉತ್ತರಿಸಿದನು.
ಆಗ ಅಲ್ಲಿಗೆ ಬಂದ ಕೌಶಿಕ್, ಅಂಕಲ್ ಮತ್ತೆ ರಾಮಾಯಣನಾ? ನನ್ನ ಸ್ನೇಹಿತನಿಗೆ ಒಳ್ಳೆ ಹುಡುಗಿಯನ್ನು ನಾನು ಹುಡುಕುತ್ತೇನೆ. ಎಂದ. ರಮೇಶ್ ಥ್ಯಾಂಕ್ಯೂ ಕೌಶಿಕ್ ಎಂದರು.
ಕೌಶಿಕ್, ಹೊರಡು, ರಜತ್ ಇನ್ನು ತಡವಾದರೆ, ಬಾಸ್ ನಮ್ಮಿಬ್ಬರನ್ನು ಕೆಲಸದಿಂದ ತೆಗೆದುಹಾಕುತ್ತಾರೆ ಎಂದು ರಜತ್ ಮತ್ತು ಕೌಶಿಕ್ ಕೆಲಸಕ್ಕೆ ಹೊರಟರು.
****
ರಜತ್ ಮತ್ತು ಕೌಶಿಕ್ ತುಂಬಾ ಉತ್ತಮ ಸ್ನೇಹಿತರು. ಬಾಲ್ಯದಿಂದ ಒಟ್ಟಿಗೆ ಇದ್ದರೂ, ಒಟ್ಟಿಗೆ ಒಂದೇ ಕಂಪನಿಯಲ್ಲಿ ಕೆಲಸ ಮಾಡುತಿದ್ದರು. ಸಮಯಕ್ಕೆ ಸರಿಯಾಗಿ ಆಫೀಸು ತಲುಪಿದರು. ರಜತ್ ತನ್ನ ಕೆಲಸವನ್ನು ಬೇಗ ಮಾಡಿ ಮುಗಿಸಿದ. ಹಾಗೆ ಸುಮ್ಮನೆ ಕೂತು ಬೋರಾಯಿತು. ತಕ್ಷಣ ಟೇಬಲ್ ಮೇಲಿದ್ದ ಮೊಬೈಲ್ ತೆಗೆದನು. ಏನು ಮಾಡುವುದು? ಎಂದು ಯೋಚಿಸುತ್ತಾ ಇರುವಾಗ 'ಒಂದು ರಾಂಗ್ ನಂಬರ್ ಡಯಲ್ ಮಾಡಿದರೆ ಹೇಗೆ? ಎಂಬ ಆಲೋಚನೆ ಬಂತು. ತಕ್ಷಣ ಮನಸ್ಸಿಗೆ ತೋಚಿದ ನಂಬರ್ ಒಂದಕ್ಕೆ ಡಯಲ್ ಮಾಡಿದ.
'ಹಲೋ' ಎಂದ ರಜತ್.
'ಹಲೋ, ಯಾರು?' ಆ ಕಡೆಯಿಂದ ಹೆಣ್ಣಿನ ಮಧುರ ಧ್ವನಿಯೊಂದು ಕೇಳಿಸಿತು.
'ನೀವ್ಯಾರು ಮಾತಾಡ್ತಾ ಇರೋದು?' ಎಂದ ರಜತ್.
ಆಗ, ಕಾಲ್ ಮಾಡಿರೋದು ನೀವು. ಈಗ ಹೇಳಿ ನೀವ್ಯಾರು ಅಂತ' ಅಂದಳು.
'ನಾನು ಗೊತ್ತಾಗಿಲ್ವಾ, ಅಭಿಷೇಕ್ ಬಚ್ಚನ್'
'ಓ... ನೀವಾ? ನಾನು ಕಣ್ರೀ ಐಶ್ವರ್ಯ ಮಾತಾಡೋದು ಗೊತ್ತಾಗಿಲ್ವಾ. ಐಶ್ವರ್ಯಾ ರೈ ಕಣ್ರೀ?' ಎಂದಳು ರೇಶ್ಮಾ.
'ಸುಮ್ಮನೆ ಸುಮ್ಮನೆ ಹೇಳ್ಬೇಡಿ. ನಿಮ್ಮ ಹೆಸರು ಹೇಳಿ... ಪ್ಲೀಸ್ ಪ್ಲೀಸ್...' ಎಂದ.
ಅದಕ್ಕೆ ರೇಶ್ಮಾ, ನೀವೇ ಹೇಳಿ ಪ್ಲೀಸ್... ನೀವ್ಯಾರು? ಎಂದಳು.
ಆಗ ರಜತ್ ನನ್ನ ಹೆಸರು 'ರಾಂಗ್ ನಂಬರ್'
ನನ್ನ ಹೆಸರು 'ರೈಟ್ ನಂಬರ್' ಎಂದು ರೇಶ್ಮಾ ಹೇಳಿ ಕಾಲ್ ಕಟ್ ಮಾಡಿದಳು.
***
ಕೆಲಸದಿಂದ ಹೊರಡುವ ಸಮಯದಲ್ಲಿ ನಡೆದ ವಿಷಯವನ್ನು ತನ್ನ ಸ್ನೇಹಿತ ಕೌಶಿಕ್ ಬಳಿ ಹೇಳಿದನು.
ಕೌಶಿಕ್ ಅವಳ ಹೆಸರೇನು? ಎಲ್ಲಿರುವಳು? ಎಂದ.
ಅದಕ್ಕೆ ರಜತ್ ಗೊತ್ತಿಲ್ಲ. ಆದರೆ ... ಅವಳೇ ನನ್ನ ಡ್ರೀಮ್ ಗರ್ಲ್. ಅವಳ ಮಾತುಗಳನ್ನು ರೆಕಾರ್ಡ್ ಮಾಡಿದ್ದೇನೆ. ಕೇಳು, ಎಂದು ಹೇಳುತ್ತಾ ಅವಳ ಮಧುರ ಧ್ವನಿ ಕೇಳಿಸಿದ.
ಮುಂದೆ ಇಬ್ಬರೂ ಮೊಬೈಲ್ ಕಾಲ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಅವರ ಗೆಳೆಯನನ್ನು ಸಂಪರ್ಕಿಸಿ ಆ ಮೊಬೈಲ್ ಸಂಖ್ಯೆಯಲ್ಲಿ ಇರುವ ಹೆಸರು ರೇಶ್ಮಾ ಎಂದು ಖಾತ್ರಿ ಪಡಿಸಿಕೊಂಡರು. ವಿಳಾಸದಿಂದ ಮಂಗಳೂರಿನ ಹುಡುಗಿ ಎಂದು ತಿಳಿದುಕೊಂಡರು.
ಕೌಶಿಕ್ ನೀನು, ಅವಳು ನಿನ್ನ ಡ್ರೀಮ್ ಗರ್ಲ್ ಅಂತ ಹೇಳುತ್ತೀ, ಅವಳಿಗೆ ಮದುವೆ ಆಗಿದ್ದರೆ ಅಥವಾ ಫಿಕ್ಸ್ ಆಗಿದ್ರೆ ಏನು ಮಾಡ್ತೀಯಾ? ಎಂದಾಗ ರಜತ್,
ಗೊತ್ತಿಲ್ಲ ಆದರೆ ನನಗೆ ಇಷ್ಟವಾದ್ಳು. ನಿನಗೆ ಗೊತ್ತೇ ಇದೆಯಲ್ಲ ಅವಳ ಇಂಪಾದ ಧ್ವನಿ ಮತ್ತು ಮಾತುಗಳು ಎಂದು ಹೇಳಿದ. ನಂತರ ಮನೆಗೆ ತೆರಳಿದರು.
***
ಇತ್ತ ರೇಶ್ಮಾ ಕೂಡಾ, ರಾಂಗ್ ನಂಬರ್ ಬಗೆಗಿನ ಎಲ್ಲಾ ವಿಷಯ ತಿಳಿಯಲು ಕಸ್ಟಮರ್ ಕೇರ್‌ಗೆ ಕಾಲ್ ಮಾಡಿ ವಿಚಾರಿಸಿದಾಗ ರಜತ್ ಬೆಂಗಳೂರಿನಲ್ಲಿ ಇಂಜಿನಿಯರ್ ಎಂದು ತಿಳಿಯಿತು. ಮುಂದೆ ಸುಮ್ಮನಾದಳು.
***
ಇತ್ತ ರಜತ್, ರಾತ್ರಿ ಮಲಗುವಾಗ `ರಾಂಗ್ ನಂಬರ್ ಬಗ್ಗೆ ನೆನಪಾಗಿ, ಏನು ಮಾಡ್ತಾ ಇರುತ್ತಾಳೆ? ಎಂದು ತಿಳಿಯಲು ಮತ್ತೆ ಕಾಲ್ ಮಾಡುವನು.
ಕಾಲ್ ರಿಸೀವ್ ಮಾಡಿ ಮಾಡಿ 'ಏನು ರಾಂಗ್ ನಂಬರ್ ಮತ್ತೆ ಕಾಲ್ ಮಾಡಿದೆ?' ಅಂದಳು.
ಹಾಗೇನಿಲ್ಲ. ರೈಟ್ ನಂಬರ್ ನೆನಪಾಯಿತು. ಹೌದು, ನಿಮ್ಮ ಊರು ಎಲ್ಲಿ? ಎಂದನು.
ಬಿಜಾಪುರ, ನಿಮ್ಮ ಊರು...? ಎಂದು ರೇಶ್ಮಾ ಅಂದಾಗ 'ಕಾಸರಗೋಡು' ಅಂದ.
ಆಗ ಇಬ್ಬರಿಗೂ ಒಂದು ವಿಷಯ ತಿಳಿದು ಇಬ್ಬರು ಜೋರಾಗಿ ನಗುತ್ತಾರೆ, ಆಗ ಅಲ್ಲಿಗೆ ಬಂದ ರಮೇಶ್, ಮಗನ ಬಳಿ,
ಯಾರ ಹತ್ರ ಮಾತಾಡ್ತಿದ್ದೀಯಾ? ಅಂದರು.
ಆಗ ರಜತ್, ನನ್ನ ಗರ್ಲ್ ಫ್ರೆಂಡ್, ಡ್ರೀಮ್ ಗರ್ಲ್ ಡ್ಯಾಡಿ ಅಂದ.
ಆಗ ಸಂತೋಷದಿಂದ ರಮೇಶ್, ಅವನ ಕೈಯಿಂದ ಮೊಬೈಲ್ ಕಿತ್ತುಕೊಂಡು ನಿನ್ನ ಹೆಸರೇನಮ್ಮಾ... ಎಂದು ಕೇಳಿದನು.
ಆಗ ರೇಶ್ಮಾ ನೀವು ಮಗನ ಬಳಿ ಹೇಳದಿದ್ದರೆ ಹೇಳುತ್ತೇನೆ ಅಂದಳು. ಆಗ ರಮೇಶ್ ನಾನು ನನ್ನ ನಂಬರ್ ಕೊಡ್ತೇನೆ ಮತ್ತೆ ಕಾಲ್ ಮಾಡು. ಮಾತಾಡ್ತೀನಿ ಎಂದು ನಂಬರ್ ಕೊಟ್ಟು ಕಾಲ್ ಕಟ್ ಮಾಡಿದ.
***
(ಮುಂದುವರಿಯುತ್ತದೆ)
-ಶ್ವೇತಾ ವಿ, ಹರಿಹರ, ದಾವಣಗೆರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ